Wednesday, January 22, 2025

ಹಾವೇರಿಯಲ್ಲಿ ಹೆಚ್ಚಾದ ಕಳ್ಳರ ಕೈಚಳಕ

ಹಾವೇರಿ : ಜಿಲ್ಲೆಯಲ್ಲಿ ಹೆಚ್ಚಾದ ಕಳ್ಳರು, ರಾತ್ರಿ ಮಲಗಿದ್ದ ವೇಳೆ ಕೈಚಳಕ ತೋರಿಸುತ್ತಿರುವ ಕಿರಾತಕರ ಗುಂಪು ಘಟನೆ ಬಸವೇಶ್ವರ ನಗರದಲ್ಲಿ ನಡೆದಿದೆ.

ಪ್ರತಿಷ್ಟಿತ ನಗರದ ಮನೆಗಳೇ ಈ ಕಳ್ಳರ ಟಾರ್ಗೆಟ್ ಆಗಿದ್ದು, ರಾತ್ರಿ ಮಲಗಿದ್ದ ವೇಳೆ ಹಿರಿಯರು, ಅಜ್ಜ ಮತ್ತು ಅಜ್ಜಿಯರು ಇರುವ ಮನೆಗಳ ಮೇಲೆ ಈ ಗ್ಯಾಂಗ್​ನ ಟಾರ್ಗೆಟ್. ಈ ಹಿನ್ನೆಲೆ ನಗರದ ನಿವಾಸಿಗಳು ಭಯದಲ್ಲಿ ಜೀವನ ಸಾಗಿಸುತ್ತಿದ್ದಾರೆ.

ಇದನ್ನು ಓದಿ : ನಾಳೆಯಿಂದ ದ್ವಿತೀಯ PUC 2ನೇ ಪೂರಕ ಪರೀಕ್ಷೆ ಶುರು

ಈಗಾಗಲೇ 10 ಕ್ಕೂ ಹೆಚ್ಚು ಮನೆಗಳಿಗೆ ಕನ್ನ ಹಾಕಿರುವ ಕದೀಮರು, ಮನೆಯಲ್ಲಿರುವ ಬೆಲೆ ಬಾಳುವ ಬಂಗಾರ ಮತ್ತು ಬೆಳ್ಳಿ ಸೇರಿದಂತೆ ವಿವಿಧ ವಸ್ತು ಕದ್ಯೊಯ್ದಿರುವ ಕಿರಾತಕರು. ಕಳ್ಳತನಕ್ಕೆ ಬರುವುದಲ್ಲದೆ ಕೈಯಲ್ಲಿ ಕಂದ್ಲಿ, ಮಚ್ಚು, ತಲ್ವಾರ್ ಮತ್ತು ರಾಡ್ ಹಿಡಿದು ಓಡಾಡುತ್ತಿರುವ ಕಳ್ಳತನ ಗ್ಯಾಂಗ್. ಈ ವೇಳೆ ಸಿ ಬ್ಲಾಕ್ ನಲ್ಲಿ ನಡೆದ ಕಳ್ಳರ ಕೈಚಳಕದ ವಿಡಿಯೋ ಸಿಸಿ ಕ್ಯಾಮರಾ ದಲ್ಲಿ ಸೆರೆ.

ಈ ಘಟನಾ ಸಂಬಂಧ ನಗರದ ಪೋಲಿಸ್ ಇಲಾಖೆಯವರಿಗೆ ರಾತ್ರಿ ವೇಳೆ ಗಸ್ತು ನೀಡುವಂತೆ ಮನವಿ ಮಾಡಿಕೊಳ್ಳುತ್ತಿರುವ ಬಸವೇಶ್ವರ ನಗರದ ಜನರು.

RELATED ARTICLES

Related Articles

TRENDING ARTICLES