Thursday, January 23, 2025

ಚಾಕುವಿನಿಂದ ಇರಿದು ಯುವಕನ ಕೊಲೆ

ಮೈಸೂರು : ಒರ್ವ ಯುವಕನನ್ನು ಚಾಕುವಿನಿಂದ ಇರಿದು ಕೊಲೆ ಮಾಡಿದ ಕಿಡಿಗೇಡಿಗಳು ಘಟನೆ ಜಿಲ್ಲೆಯ ವಿದ್ಯಾನಗರ ಬಡಾವಣೆಯ ನಾಲ್ಕನೇ ಕ್ರಾಸ್​ನಲ್ಲಿ ನಡೆದಿದೆ.

ಬಾಲರಾಜ್ (28) ಕೊಲೆಯಾದ ಯುವಕ. ವಿದ್ಯಾನಗರ ನಿವಾಸಿಯಾದ ಯುವಕ. ನಿನ್ನೆ ನಗರದ ಬಡಾವಣೆಯಲ್ಲಿ ಹೋಗುತ್ತಿದ್ದ ವೇಳೆ ಬಂದ ಆರೋಪಿಗಳು ಬಾಲರಾಜ್​ಗೆ ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದಾರೆ.

ಇದನ್ನು ಓದಿ : ಹಾವೇರಿಯಲ್ಲಿ ಹೆಚ್ಚಾದ ಕಳ್ಳರ ಕೈಚಳಕ

ನಾಲ್ಕು ಜನರಿಂದ ಕೃತ್ಯ ನಡೆದಿದೆ ಎಂದು ಆರೋಪ ಕೇಳಿ ಬಂದಿದೆ. ಆದ್ರೆ ಕೊಲೆಗೆ ಕಾರಣ ಏನೆಂದು ಇನ್ನೂ ತಿಳಿದು ಬಂದಿಲ್ಲ. ಈ ಘಟನಾ ಹಿನ್ನೆಲೆ ತೇಜಸ್, ಸಂಜಯ್, ಕಿರಣ್ ಮತ್ತು ಸಾಮ್ರಾಟ್ ಎಂಬ ನಾಲ್ವರ ವಿರುದ್ಧ ಎಫ್ ಐ ಆರ್ ದಾಖಲಿಸಿದ ಪೋಲಿಸರು. ಸದ್ಯ ನಜರ್​ಬಾದ್ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

RELATED ARTICLES

Related Articles

TRENDING ARTICLES