Tuesday, January 21, 2025

ಕಡೆಗೂ ಯಶ್ ಫ್ಯಾನ್ಸ್​ಗೆ ಕ್ಷಮೆ ಕೇಳಿದ ತಮಿಳು ನಟ

ಬೆಂಗಳೂರು : ಕೆಜಿಎಫ್​ ಚಿತ್ರದ ಮೂಲಕ ನ್ಯಾಷನಲ್ ಸ್ಟಾರ್ ಆಗಿ ಮಿಂಚುತ್ತಿರುವ ನಟ ಯಶ್ ಬಗ್ಗೆ ಹಗುರವಾಗಿ ಮಾತನಾಡಿದ್ದ ತಮಿಳು ನಟ ಇದೀಗ ಕ್ಷಮೆ ಕೇಳಿದ್ದಾರೆ.

‘ಯಶ್ ನನ್ನ ಬಳಿ ಕಣ್ಣೀರು ಹಾಕಿದ್ದ.. ನಾನೇ ಊಟ ಮಾಡಿಸಿದ್ದೆ’ ಎಂದಿದ್ದ ತಮಿಳು ನಟ ಜೈ ಆಕಾಶ್ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಯಶ್ ಬಗೆಗಿನ ಈ ಹೇಳಿಕೆ ವಿರುದ್ಧ ರಾಕಿಭಾಯ್ ಫ್ಯಾನ್ಸ್ ಆಕ್ರೋಶಗೊಂಡಿದ್ದರು.

ಸಿಕ್ಕಾಪಟ್ಟೆ ಟ್ರೋಲ್ ಆಗಿ, ನೆಗೆಟಿವ್ ಕಮೆಂಟ್ಸ್​ನಿಂದ ಬೇಸತ್ತ ನಟ ಜೈ ಆಕಾಶ್, ಇದೀಗ ಇನ್‌ಸ್ಟಾಗ್ರಾಮ್ ವಿಡಿಯೋ ಮೂಲಕ ಅಸಮಾಧಾನಗೊಂಡ ಯಶ್ ಫ್ಯಾನ್ಸ್​ಗೆ ಕ್ಷಮೆ ಕೇಳಿದ್ದಾರೆ. ಆ ಮೂಲಕ ಸ್ಪಷ್ಟನೆ ನೀಡಿದ್ದಾರೆ.

ನನ್ನ ಪ್ರೀತಿಯ ಸಹೋದರ

‘ನಟ ಯಶ್ ಜಂಭದ ಹುಡುಗಿ ಚಿತ್ರದಲ್ಲಿ ನನ್ನ ತಮ್ಮನ ಪಾತ್ರ ಮಾಡಿದ್ದರು. ಅವ್ರು ಸದಾ ನನ್ನ ಸಹೋದರ ಇದ್ದಂತೆ. ಅದೇ ಸಲುಗೆಯಿಂದ ಹಾಗೆ ಮಾತನಾಡಿದ್ದೆ. ಅವ್ರು ಇಂಟರ್ ನ್ಯಾಷನಲ್ ಸ್ಟಾರ್ ಆಗಿ ಬೆಳೆಯಬೇಕು ಅನ್ನೋದು ನನ್ನ ಆಸೆ. ಕೆಜಿಎಫ್ ಹೀರೋ ಯಾವಾಗಲೂ ನನ್ನ ಪ್ರೀತಿಯ ಸಹೋದರ’ ಎಂದು ಯಶ್ ಬಗೆಗಿನ ಹೇಳಿಕೆಗೆ ಸ್ಪಷ್ಟನೆ ನೀಡಿದ್ದಾರೆ.

ನಟ ಆಕಾಶ್ ಹೇಳಿದ್ದೇನು?

ನನ್ನ ಸಿನಿಮಾದಲ್ಲಿ ಯಶ್ ತಮ್ಮನ ಪಾತ್ರ ಮಾಡಿದ್ದರು. ಆ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಆದರು. ಆ ಟೈಮ್​ನಲ್ಲಿ ಯಶ್ ಸೀರಿಯಲ್​ಗಳನ್ನು ಮಾಡ್ತಿದ್ರು. ಇನ್ಮುಂದೆ ಧಾರಾವಾಹಿ ಮಾಡಲ್ಲ, ಸಿನಿಮಾ ಮಾಡ್ತೀನಿ. ನನಗೆ ಯಾರೂ ಅವಕಾಶ ಕೊಡ್ತಿಲ್ಲ, ಗೌರವ ಇಲ್ಲ ಅಂತ ಯಶ್ ನನ್ನ ಮುಂದೆ ಅತ್ತರು. ಆಗ ನಾನು ಅವರಿಗೆ ಊಟ ಕೊಟ್ಟು, ಪಿಕ್‌ಪ್ ಮಾಡಿ, ಡ್ರಾಪ್ ಕೂಡ ಮಾಡ್ತಿದ್ದೆ. ನನ್ನ ಸಿನಿಮಾದಲ್ಲಿ ಯಶ್‌ಗೆ ತಮ್ಮನ ಪಾತ್ರದ ಆಫರ್ ಕೂಟ ಕೊಟ್ಟಿದ್ದೆ. ನಾನು ಮಾಡಿದ್ದ ಸಿನಿಮಾ ಹಿಟ್ ಆಗಿ ನಾನು ತೆಲುಗು, ತಮಿಳು ಚಿತ್ರರಂಗದಲ್ಲಿ ಬ್ಯುಸಿ ಆದೆ. ಯಶ್ ಸ್ಯಾಂಡಲ್​ವುಡ್​ನಲ್ಲಿ ಹೆಸರು ಮಾಡಿದ. ಕೆಜಿಎಫ್ ಮೂಲಕ ದೊಡ್ಡ ಹೆಸರು ಮಾಡಿದ್ದಾರೆ’ ಎಂದು ಜೈ ಆಕಾಶ್ ಹೇಳಿದ್ದರು.

RELATED ARTICLES

Related Articles

TRENDING ARTICLES