ಬೆಂಗಳೂರು : ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ನಡೆದ ನಿರ್ಣಯಗಳಲ್ಲಿ ಇಂದಿರಾ ಕ್ಯಾಂಟೀನ್ ಊಟದ ದರವನ್ನು ದುಬಾರಿ ಮಾಡಿದ ಸರ್ಕಾರ.
ಇಂದಿರಾ ಕ್ಯಾಟೀನ್ಗಳಲ್ಲಿ ಊಟಕ್ಕೆ 60 ರೂಪಾಯಿ ನಿಗದಿ ಮಾಡಲಾಗಿತ್ತು. ಈ ಭಾರಿ ಹೊಸ ಇಂದಿರಾ ಕ್ಯಾಂಟೀನ್‌ಗಳಲ್ಲಿ ಪರಿಷ್ಕೃತ ದರ. ಪ್ರತಿ ಊಟದ ದರ 27 ರೂಪಾಯಿಗೆ ಏರಿಕೆ ಮಾಡಲಾಗಿದೆ. ಇನ್ನು 33 ರೂಪಾಯಿಯನ್ನು ಸಬ್ಸಿಡಿ ರೂಪದಲ್ಲಿ ಸರ್ಕಾರ ನೀಡಲಿದೆ. ರಾಜ್ಯಾದ್ಯಂತ ನಿರ್ಮಾಣವಾಗಲಿರುವ ಇಂದಿರಾ ಕ್ಯಾಟೀನ್ಗಳಲ್ಲಿ ಈ ದರ ಇರಲಿದೆ. ಹಾಗೆಯೇ ಬಿಬಿಎಂಪಿ ವ್ಯಾಪ್ತಿಯ ಇಂದಿರಾ ಕ್ಯಾಟೀನ್ಗಳಲ್ಲಿ ಹಳೆ ದರವೇ ಮುಂದುವರೆಯಲಿದೆ.
ಇದನ್ನು ಓದಿ : ಉದ್ಯಾನ್ ಎಕ್ಸ್ಪ್ರೆಸ್ ರೈಲಿನಲ್ಲಿ ಬೆಂಕಿ ಅವಘಡ : 3ನೇ ಫ್ಲಾಟ್ಫಾರಂ ರೈಲುಗಳ ಮಾರ್ಗ ಬದಲಾವಣೆ!
ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ 27 ರೂಪಾಯಿ ಇರಲಿದೆ. ಬಿಬಿಎಂಪಿ ಹೊರತುಪಡಿಸಿ ಸ್ಥಳೀಯ ಸಂಸ್ಥೆಗಳಲ್ಲಿ ಹೊಸದಾಗಿ 188 ಇಂದಿರಾ ಕ್ಯಾಟೀನ್ ತೆಗೆಯಲು ಒಪ್ಪಿಗೆ ನೀಡಲಾಗಿದೆ. ಸ್ಥಳೀಯರ ತಿಂಡಿ ತಿನಿಸುಗಳನ್ನು ಗಮನದಲ್ಲಿ ಇಟ್ಟುಕೊಂಡು ಈ ಭಾರಿ ಹೊಸ ಮೆನು ಇರಲಿದೆ.