Thursday, January 23, 2025

ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್ ಕೊಟ್ಟ ಸರ್ಕಾರ

ಬೆಂಗಳೂರು : ನಗರದಲ್ಲಿ ನಮ್ಮ ಮೆಟ್ರೋ ನಿಲ್ದಾಣಗಳಲ್ಲಿ ನ್ಯಾಷನಲ್ ಕಾಮನ್ ಮೊಬಿಲಿಟಿ ಬಳಕೆಗೆ ನಿರ್ಧಾರ ಮಾಡಿದ ಸರ್ಕಾರ.

ಆಗಸ್ಟ್‌ 21 ರಿಂದ ಎಲ್ಲ ಮೆಟ್ರೋ ನಿಲ್ದಾಣಗಳಲ್ಲಿ ರುಪೇ ಎನ್‌ಸಿಎಂಸಿ ಕಾರ್ಡ್‌ಗಳು ಖರೀದಿಗೆ ಲಭ್ಯ. ದೇಶಾದ್ಯಂತ ಪ್ರಯಾಣಕ್ಕೆ ಮತ್ತು ಶಾಪಿಂಗ್ ಅಗತ್ಯಗಳಿಗಾಗಿ ನ್ಯಾಷನಲ್ ಕಾಮನ್ ಮೊಬೆಲಿಟಿ ಕಾರ್ಡ್​ನ್ನು ಜನರಿಗೆ ಅನುಕೂಲ ಆಗುವಂತೆ ಮಾಡಿದ ಸರ್ಕಾರ.

ಇದನ್ನು ಓದಿ : ಚಾಕುವಿನಿಂದ ಇರಿದು ಯುವಕನ ಕೊಲೆ

ಪ್ರಸ್ತುತವಾಗಿ ಬಳಕೆಯಲ್ಲಿರುವ ಕಾಂಟ್ಯಾಕ್ಸ್​ಲೆಸ್ ಸ್ಮಾರ್ಟ್​ ಕಾರ್ಡ್​ಗಳು (ಸಿಎಸ್​ಸಿ), ಕ್ಲೋಸ್ ಲೂಪ್ ಕಾರ್ಡ್​ ಮತ್ತು ಒನ್ ನೇಷನ್ ಒನ್ ಕಾರ್ಡ್​ನ ಅನುಗುಣವಾಗಿ ರುಪೇ ನ್ಯಾಷನಲ್ ಕಾಮನ್ ಮೊಬಿಲಿಟಿ ಕಾರ್ಡ್​ನ್ನು ಪ್ರಯಾಣಿಕರಿಗೆ ನೀಡಲು ನಿರ್ಧರಿಸಿದೆ ಎಂದು ಮೆಟ್ರೋ ರೈಲು ನಿಗಮ ಮಾಹಿತಿ ನೀಡಿದೆ.

ಅದೇ ರೀತಿ ದೇಶದ ಎಲ್ಲ ಸಾರಿಗೆ ವ್ಯವಸ್ಥೆಗಳಲ್ಲಿ ಎನ್‌ಸಿಎಂಸಿ ಕಾರ್ಡ್ ಬಳಕೆ ಮಾಡಬಹುದು ಎಂದು ಹೇಳಿದ್ದಾರೆ.

RELATED ARTICLES

Related Articles

TRENDING ARTICLES