Wednesday, December 25, 2024

USA ಯಲ್ಲಿ ದಾವಣಗೆರೆ ಮೂಲದ ದಂಪತಿ,ಮಗು ಸಾವು; ಮೃತದೇಹ ತರಿಸಲು ತಾಯಿ ಮನವಿ

ದಾವಣಗೆರೆ : ಅಮೇರಿಕಾದಲ್ಲಿ ದಾವಣಗೆರೆ ಮೂಲದ ಮೂವರು ಸಾವನ್ನಪ್ಪಿದ್ದ ಹಿನ್ನೆಲೆ ಮರಣೋತ್ತರ ಪರೀಕ್ಷೆ ಬಳಿಕ ಸಂಪೂರ್ಣ ಮಾಹಿತಿ ಸಿಗುತ್ತದೆ ಎಂದು ಬಾಲ್ಟಿಮೋರ್ ಕೌಂಟಿ ಪೊಲೀಸರು ಮಾಹಿತಿ ನೀಡಿದ್ದಾರೆ.

ಆಗಸ್ಟ್ 15 ರಂದು ರಾತ್ರಿ ವೇಳೆ ಪತ್ನಿ ಪ್ರತಿಭಾ ಹೊನ್ನಾಳ (35),ಪತಿ ಯೋಗೇಶ್ ಹೊನ್ನಾಳ (37) ಹಾಗೂ ಮಗು ಯಶ್ ಹೊನ್ನಾಳ (6)ಮೃತಪಟ್ಟ ದುರ್ದೈವಿ ಟೆಕ್ಕಿಗಳು. ಅಮೇರಿಕಾದ ಮೇರಿಲ್ಯಾಂಡ್ ರಾಜ್ಯದ ಬಾಲ್ಟಿಮೋರ್ ನಲ್ಲಿ ಮೃತ ಪಟ್ಟ ದಾವಣಗೆರೆ ಮೂಲದ ಕುಟುಂಬ. ಆದರೆ ಆತ್ಮಹತ್ಯೆ ಮಾಡಿಕೊಳ್ಳಲು ಕಾರಣ ಏನೆಂದು ನಿಖರವಾದ ಕಾರಣ ತಿಳಿದು ಬಂದಿಲ್ಲ.

ಇದನ್ನು ಓದಿ : ಹೋಟೆಲ್​ನಲ್ಲಿ ಊಟ ಬೀಸಾಡುತ್ತಿದ್ದವರಿಗೆ ಬೀಳುತ್ತೆ ಬ್ರೇಕ್

ಆದ್ದರಿಂದ ಬಳಿಕ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಒಳಪಡಿಸಿದ್ದು, ಪರೀಕ್ಷೆ ಬಳಿಕ ಸತ್ಯ ಬಯಲಾಗುವ ಸಾಧ್ಯತೆ ಇದೆ. ಈ ಘಟನೆಗೆ ಪತಿ, ಪತ್ನಿ ಕಲಹಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಶಂಕೆಯಿದೆ ಎಂದು ಪೊಲೀಸರಿಂದ ಮಾಹಿತಿ ಬಂದಿದೆ. ಮೃತರನ್ನು ಕಳೆದುಕೊಂಡು ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ಕಳೆದ ಎರಡ್ಮೂರು ದಿನಗಳಿಂದ ಅಮೇರಿಕಾದಲ್ಲಿ ಮೃತದೇಹಗಳು ಇರುವುದರಿಂದ, ಮೃತದೇಹಗಳನ್ನು ತಾಯ್ನಾಡಿಗೆ ತರಿಸಿಕೊಡುವಂತೆ ಜಿಲ್ಲಾಧಿಕಾರಿ ಡಾ. ವೆಂಕಟೇಶ್ ಅವರ ಮೂಲಕ ಸರ್ಕಾರಕ್ಕೆ ಮನವಿ ಪತ್ರ ನೀಡಿದ ಮೃತ ಯೋಗೇಶ್ ತಾಯಿ ಶೋಭಾ. ಕುಟುಂಬಸ್ಥರ ಅಳಲನ್ನು ಕಂಡು ವಿದೇಶಾಂಗ ಸಚಿವಾಲಯಕ್ಕೆ ಘಟನೆ ಕುರಿತು ಮಾಹಿತಿ ನೀಡಿದ ಜಿಲ್ಲಾಡಳಿತ. ವಿದೇಶಾಂಗ ಸಚಿವಾಲಯದ ಉತ್ತರಕ್ಕೆ ಕಾಯುತ್ತಿರುವ ಜಿಲ್ಲಾಡಳಿತ ಮತ್ತು ಮೃತನ ಕುಟುಂಬಸ್ಥರು.

RELATED ARTICLES

Related Articles

TRENDING ARTICLES