Monday, December 23, 2024

ನೀವು ಕಪಿಗಳು, ಕಪಿಚೇಷ್ಠೆ ಮಾಡುತ್ತಿದ್ದೀರಿ : ಹರಿಪ್ರಸಾದ್ ಗುಡುಗು

ಬೆಂಗಳೂರು : ದೇವರಾಜ್ ಅರಸು ಹಾಗೂ ರಾಜೀವ್ ಗಾಂಧಿ ಅವರ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ ಹೆಸರು ಪ್ರಸ್ತಾಪ ಮಾಡದೆ ಕಾಂಗ್ರೆಸ್ ಹಿರಿಯ ನಾಯಕ ಬಿ.ಕೆ ಹರಿಪ್ರಸಾದ್ ಅವರು ವಾಗ್ದಾಳಿ ನಡೆಸಿದ್ದಾರೆ.

ದೇವರಾಜ್ ಅರಸು ಕಾಲದಲ್ಲಿ  ನಾವು ಬಂದವರು. ಅಶೋಕ್ ಪಟ್ಟಣ್‌, ನಜೀರ್ ಎಲ್ಲಾ ಅರಸು ಅವರ ಜೊತೆಗೆ ಇದ್ದರು. ನಾವು ವಿರೋಧಿಗಳ ಬಣದಲ್ಲಿದ್ದವರು. ಆದರೂ ಕರೆದು ಮಾತಾಡಿಸುವವರು. ನೀವು ಕಪಿಗಳು, ಕಪಿಚೇಷ್ಠಿ ಮಾಡುತ್ತಿದ್ದೀರಾ. ಇದರಿಂದ ವಿಪಕ್ಷಗಳಿಗೆ ಅನುಕೂಲ ಆಗುತ್ತೆ‌. ಆದರೂ ನಾನು ನಿಮ್ಮನ್ನು ರಕ್ಷಣೆ ಮಾಡ್ತೇನೆ ಎಂದು ಹೇಳುತ್ತಿದ್ದರು ಎಂದು ಕುಟುಕಿದ್ದಾರೆ.

ಈಗ ಕರೆದು ಮಾತಾಡೋದು ಇರಲಿ, ವಿರೋಧಿಗಳ ತರ ಅಲ್ಲ, ಶತ್ರುಗಳಂತೆ ನೋಡುತ್ತಾರೆ. ಅರಸು ಅವರು ಸಣ್ಣ ಸಮುದಾಯಗಳನ್ನು ಗುರುತಿಸುತ್ತಿದ್ದರು. ಹಿಂದುಳಿದ ವರ್ಗ ಅಂದರೆ ಒಂದು ಜಾತಿಯಲ್ಲ. ಎಲ್ಲರನ್ನು ಜೊತೆಗೆ ಕರೆದುಕೊಂಡು ಹೋಗಬೇಕು. ಇಲ್ಲ ಅಂದರೆ ಮನೆಗೆ ಕಳಿಸುತ್ತಾರೆ ಎಂದು ಚಾಟಿ ಬೀಸಿದ್ದಾರೆ.

ಪಕ್ಷಕ್ಕೆ ಸಂಕಷ್ಟ ಬರಲಿದೆ

ಕಾರ್ಯಕರ್ತರ ಮದುವೆ ಅಂದರೆ ಅರಸು ತಾವು ಹೋಗಿಲ್ಲ ಅಂದರೂ, ಅಂದಿನ ರಾಜಕೀಯ ಕಾರ್ಯದರ್ಶಿ ಕಡೆಯಿಂದ 10ರಿಂದ15 ಸಾವಿರ ಕೊಟ್ಟು ಕಳಿಸುತ್ತಿದ್ದರು. ಸಿಎಂ ರಾಜಕೀಯ ಕಾರ್ಯದರ್ಶಿ ಇಲ್ಲೆ ಇದ್ದಾರೆ, ಅವರ ಗಮನಕ್ಕೆ.. ಕಾರ್ಯಕರ್ತರ ರಕ್ಷಣೆ ಮಾಡಬೇಕು. ಇಲ್ಲ ಅಂದರೆ ಪಕ್ಷಕ್ಕೆ ಸಂಕಷ್ಟ ಬರಲಿದೆ ಎಂದು ಎಚ್ಚರಿಕೆ ಸಂದೇಶ ನೀಡಿದ್ದಾರೆ.

RELATED ARTICLES

Related Articles

TRENDING ARTICLES