Wednesday, January 22, 2025

ಬಾಲಕನ ಅಪಹರಣಕ್ಕೆ ಯತ್ನಿಸಿದ ದುಷ್ಕರ್ಮಿಗಳು

ಕಲಬುರಗಿ : ಸರ್ಕಾರಿ ಶಾಲೆಯೊಂದರಲ್ಲಿ ಒರ್ವ ಬಾಲಕನ ಅಪಹರಣಕ್ಕೆ ಯತ್ನಿಸಿದ ದುಷ್ಕರ್ಮಿಗಳು ಘಟನೆ ಜಿಲ್ಲೆಯ ಮಹಾಗಾಂವ್ ಸರ್ಕಾರಿ ಶಾಲೆಯ ಬಳಿ ನಡೆದಿದೆ.

ಶರಣಯ್ಯ ಶಿವಣ್ಣ (13) ಅಪಹರಣಕ್ಕೆ ಒಳಗಾದ ಬಾಲಕ. ಎಂಬ ವಿದ್ಯಾರ್ಥಿ ಮಹಾಗಾಂವ್ ಸರ್ಕಾರಿ ಶಾಲೆಯಲ್ಲಿ 7 ನೇ ತರಗತಿಯಲ್ಲಿ ಓದುತ್ತಿದ್ದನು. ಇಂದು ಶಾಲೆ ಮುಗಿಸಿ ಮನೆಗೆ ತೆರಳುವ ವೇಳೆ ಓಮಿನಿ ಕಾರ್​ನಲ್ಲಿ ಬಂದ ದುಷ್ಕರ್ಮಿಗಳು, ಬಾಲಕನನ್ನು ಅಪಹರಣ ಮಾಡಿದ್ದರು.

ಇದನ್ನು ಓದಿ : ಬೆಳ್ಳಂಬೆಳಗ್ಗೆ ಮೆಜೆಸ್ಟಿಕ್​​ ರೈಲು ನಿಲ್ದಾಣದಲ್ಲಿ ಬೆಂಕಿ!

ಬಳಿಕ ಕಿಡ್ನಾಪ್ ಮಾಡಿ 2 ಕಿಲೋ ಮೀಟರ್ ಹೋಗಿದ್ದ, ವೇಳೆ ದಾರಿಯಲ್ಲಿ ಪೋಲಿಸ್ ವಾಹನ ಕಂಡು ಹೆದರಿದ ಕಿಡ್ನಾಪರ್ಸ್. ಭಯಗೊಂಡು ಅಪಹರಣ ಮಾಡಿದ್ದ ಬಾಲಕನ ಹೆಬ್ಬೆರಳಿಗೆ ಬ್ಲೇಡ್​ನಿಂದ ಕೂಯ್ದ ಪಾಪಿಗಳು, ಮುಳ್ಳಿನ ಕಂಟಿಯಲ್ಲಿ ಬಿಸಾಕಿ ಸ್ಥಳದಿಂದ ಪರಾರಿಯಾಗಿದ್ದಾರೆ.

ಅದೃಷ್ಟವಶಾತ್ ಯಾವುದೇ ಅಪಾಯ ಆಗದೆ ಮುಳ್ಳಿನ ಕಂಟಿಯಿಂದ ಹೊರಬಂದು, ಕಣ್ಣೀರು ಹಾಕುತ್ತಲೆ ಮನೆಗೆ ವಾಪಸ್ ತೆರಳಿದ ಬಾಲಕ. ಬಳಿಕ ಶಿವಣ್ಣನ ಪೋಷಕರಿಗೆ ಮಾಹಿತಿ ತಿಳಿದಿದ್ದು, ಸದ್ಯ ಮಹಾಗಾಂವ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

RELATED ARTICLES

Related Articles

TRENDING ARTICLES