Friday, November 22, 2024

ಕೋರ್ಟ್​ ಆದೇಶವನ್ನು ಮಾಜಿ ಶಿಕ್ಷಣ ಸಚಿವರು ಮೊದಲು ಸರಿಯಾಗಿ ಓದ್ಲಿ: ಮಧು ಬಂಗಾರಪ್ಪ

ಬೆಂಗಳೂರು : ಶಿಕ್ಷಕರ ನೇಮಕಾತಿ ವಿಚಾರ ಮಾಜಿ ಶಿಕ್ಷಣ ಸಚಿವರು ಮೊದಲು ನ್ಯಾಯಾಲಯದ ಆದೇಶವನ್ನು ಸರಿಯಾಗಿ ನೋಡಲಿ,ಈ ಆದೇಶವನ್ನು ನಾನೇ ಮತ್ತೊಮ್ಮೆ ಕಳಿಸಿಕೊಡ್ತೀನಿ ಬೇಕು ಅಂದ್ರೆ ಎಂದು ಮಾಜಿ ಶಿಕ್ಷಣ ಸಚಿವರ  ನಾಗೇಶ್​ ಅವರಿಗೆ ಹಾಲಿ ಶಿಕ್ಷಣ ಸಚಿವ ಮಧು ಬಂಗಾರಪ್ಪ ಟಾಂಗ್​ ನೀಡಿದರು.

ನ್ಯಾಯಾಲಯವು ತನ್ನ ಆದೇಶದಲ್ಲಿ ಸ್ಪಷ್ಟವಾಗಿ ಹೇಳಿದೆ, ರಾಜ್ಯದಲ್ಲಿ 13.5 ಸಾವಿರ ಶಿಕ್ಷಕರ ನೇಮಕಾತಿಗಳ ಪ್ರಕ್ರಿಯೆಯನ್ನು ಸದ್ಯಕ್ಕೆ ಆರಂಭಿಸಿ ಆದರೇ ನೇಮಕಾತಿ ಆದೇಶವನ್ನು ನೀಡಬೇಡಿ ಎಂದಿದೆ.

ಇದನ್ನು ಓದಿ: ಕೊನೆಗೂ ಬೋನಿಗೆ ಬಿದ್ದ ಚಿರತೆ: ನಿಟ್ಟುಸಿರು ಬಿಟ್ಟ ಗ್ರಾಮಸ್ಥರು

ಶಿಕ್ಷಕರ ನೇಮಕಾತಿ ಸಂಬಂಧ ನಿರ್ದೇಶನವು ಬಿಜೆಪಿ ಆಡಳಿತಾವಧಿಯಲ್ಲೆ ಇತ್ತು, ನಮ್ಮ ಸರ್ಕಾರ ಬಂದ ಮೇಲೆ ಬಂದದ್ದಲ್ಲ. ಆವಾಗ ಇದರ ಬಗ್ಗೆ ಮಾತನಾಡದ ನೀವು, ಈಗ ಇದನ್ನು ಪ್ರಶ್ನೆ ಮಾಡೋ ನೈತಿಕತೆ ಇಲ್ಲ ಎಂದು ಮಾಜಿ ಶಿಕ್ಷಣ ಸಚಿವರ ವಿರುದ್ದ ಕಿಡಿಕಾರಿದರು.

ಬಿಜೆಪಿಯವರದ್ದು ಜನರ ಕೇವಲ ದಾರಿ ತಪ್ಪಿಸುವುದಷ್ಟೆ ಕೆಲಸ. ಅದಕ್ಕೆ ಯಾರು ತಲೆ ಕೆಡಿಸಿಕೊಳ್ಳುವ ಅವಶ್ಯಕತೆ ಇಲ್ಲ, ದಯವಿಟ್ಟು ಎಲ್ಲಾ ಶಿಕ್ಷಕ ಹುದ್ದೆ ಆಕಾಂಕ್ಷಿಗಳು ತಾಳ್ಮೆಯಿಂದ ಇದ್ದಲ್ಲಿ ಎಲ್ಲವು ಸರಿಹೋಗುತ್ತೆ.

ನಮ್ಮ ಸರ್ಕಾರ ಅಧಿಕಾರಕ್ಕೆ ಬಂದು ಕೇವಲ 75 ರಿಂದ 80 ದಿನವಷ್ಟೆ ಆಗಿದೆ, ಶಿಕ್ಷಕರ ವಿಚಾರವಾಗಿ ತ್ವರಿತವಾಗಿ ಕ್ರಮ ಕೈಗೊಳ್ಳಲು ಶ್ರಮ ವಹಿಸಿದ್ದೇವೆ ಎಂದು ಅವರು ಹೇಳಿದರು. ಮಕ್ಕಳಿಗೆ ತೊಂದರೇ ಮಾಡದೇ ಇರುವ ಶಿಕ್ಷಣ ನೀಡುವಿದೇ ನಮ್ಮ ದರ್ಮ ಮತ್ತು ನಮ್ಮ ಕರ್ತವ್ಯ, ನಮ್ಮ ಕಮಿಟ್​ ಮೇಂಟ್ ಎಂದು ಅವರು ಹೇಳಿದರು.​

RELATED ARTICLES

Related Articles

TRENDING ARTICLES