ಚಿಕ್ಕಬಳ್ಳಾಫುರ: ಮಳೆಗಾಗಿ ಗ್ರಾಮ ದೇವತೆಗಳಿಗೆ ಬೆಂಕಿ ಇಡುವ ವಿಚಿತ್ರ ಸಂಪ್ರದಾಯವು ಜಿಲ್ಲೆಯ ಬಾಗೇಪಲ್ಲಿ ತಾಲ್ಲೂಕಿನ ಮಾಡಪಲ್ಲಿ ಗ್ರಾಮದಲ್ಲಿ ನಡೆದಿದೆ.
ಈ ಬಾರಿ ವಾಡಿಕೆಗಿಂತ ಕಡಿಮೆ ಮಳೆಯಾಗದ ಹಿನ್ನೆಲೆ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ, ಈ ಹಿನ್ನೆಲೆ ಮಳೆಗಾಗಿ ಬಾಗೇಪಲ್ಲಿಯಲ್ಲಿ ವಿಚಿತ್ರ ಸಂಪ್ರದಾಯಕ್ಕೆ ಸಾಕ್ಷಿಯಾಗಿದೆ. ಬಾಗೆಪಲ್ಲಿ ತಾಲ್ಲೂಕಿನ ಮಾಡಪಲ್ಲಿ ಗ್ರಾಮದಲ್ಲಿ ಗ್ರಾಮ ದೇವತೆಯರಿಗೆ ಬೆಂಕಿ ತಗುಲಿಸುವ ಮೂಲಕ ಮಳೆಗಾಗಿ ಪ್ರಾರ್ಥನೆ ಮಾಡಲಾಗುತ್ತಿದೆ.
ಇದನ್ನೂ ಓದಿ: ಬೆಂಗಳೂರಿನಲ್ಲಿ ಇಂದಿನಿಂದ ಮಳೆ ಸಾಧ್ಯತೆ!
ಮಾಡಪ್ಪಲ್ಲಿ ಗ್ರಾಮದ ಅವಿವಾಹಿತರು ಮತ್ತು ಬಾಲಕರು ಬೆಂಕಿ ಹೊಂಡದ ಸುತ್ತಲು ಕಲ್ಲಿನ ಶವಯಾತ್ರೆ ಆಚರಣೆ ನಡೆಸಿ, ಬಳಿಕ ಗ್ರಾಮ ದೇವತೆಯನ್ನು ಸುಡ್ರೊ ಎಂದು ಕೂಗಿ ಮಳೆಗೆ ಆಹ್ವಾನ ನೀಡುತ್ತಾರೆ. ಗ್ರಾಮ ದೇವತೆಗಳ ವಿಗ್ರಹಕ್ಕೆ ಬೆಂಕಿಯನ್ನು ತಗುಲಿಸುವ ಮೂಲಕ ವರುಣನ ಆಗಮನಕ್ಕೆ ಆಹ್ವಾನ ನೀಡುವ ವಿಚಿತ್ರ ಸಂಪ್ರದಾಯ ಆಚರಣೆ ಮಾಡಿದ್ದಾರೆ.