Friday, January 10, 2025

🕚 JUST IN :

ಬೆಳ್ಳಂಬೆಳಗ್ಗೆ ಮೆಜೆಸ್ಟಿಕ್​​ ರೈಲು ನಿಲ್ದಾಣದಲ್ಲಿ ಬೆಂಕಿ!

ಬೆಂಗಳೂರು: ಬೆಳ್ಳಂಬೆಳಗ್ಗೆ ರೈಲಿನಲ್ಲಿ ಬೆಂಕಿ ಅಗಘಡ ಸಂಭವಿಸಿರುವ ಘಟನೆ ನಗರದ ಕ್ರಾಂತಿವೀರ ಸಂಗೊಳ್ಳಿರಾಯಣ್ಣ ರೈಲ್ವೇನಿಲ್ದಾಣದಲ್ಲಿ ನಡೆದಿದೆ.

ಮೆಜೆಸ್ಟಿಕ್​ ರೈಲ್ವೇ ನಿಲ್ದಾಣದ ಉದ್ಯಾನ್​ ಎಕ್ಸ್​ಪ್ರೆಸ್​ ರೈಲಿನ ಇಂಜಿನ್​ನಲ್ಲಿ ಮತ್ತು ಬೋಗಿಗಳಲ್ಲಿ ಇದ್ದಕ್ಕಿದ್ದಂತೆ ಬೆಂಕಿ ಅವಘಡ ಸಂಭವಿಸಿದೆ. ಮುಂಬೈನಿಂದ ಬೆಂಗಳೂರಿಗೆ ಆಗಮಿಸಿದ ಉದ್ಯಾನ್​ ಎಕ್ಸ್​ಪ್ರೆಸೆ ರೈಲು , ತಾಂತ್ರಿಕ ದೋಷದಿಂದ ಬೆಂಕಿ ಅವಘಡ ಸಂಭವಿಸಿರುವ ಶಂಕೆ ವ್ಯಕ್ತವಾಗಿದೆ.

ಬೆಂಕಿ ಹೊತ್ತಿಕೊಂಡಿರುವ ಬೋಗಿಗಳಲ್ಲಿ ಯಾರು ಇಲ್ಲದ ಕಾರಣ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ, ಬೆಂಕಿಯಿಂದ ದಟ್ಟ ಹೊಗೆ ಆವರಿಸಿಕೊಂಡಿದೆ. ಘಟನಾ ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಆಗಮಿಸಿದ್ದು ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದ್ದಾರೆ. ​

RELATED ARTICLES

Related Articles

TRENDING ARTICLES