ಬೆಂಗಳೂರು: ಮೆಜೆಸ್ಟಿಕ್ ರೈಲ್ವೆ ನಿಲ್ದಾಣದಲ್ಲಿಉದ್ಯಾನ್ ಎಕ್ಸ್ಪ್ರೆಸ್ ಗೆ ಬೆಂಕಿ ಬಿದ್ದ ಪ್ರಕರಣಕ್ಕೆ ಸಂಬಂಧಿಸಿ 3ನೇ ಪ್ಲಾಟ್ಫಾರಂನಲ್ಲಿನ ಬೋಗಿ ತೆರವು ಕಾರ್ಯನಡೆಯುತ್ತಿದ್ದು ಪ್ಲಾಟ್ಫಾರಂ ಬಂದ್ ಮಾಡಲಾಗಿದೆ.
ಉದ್ಯಾನ್ ಎಕ್ಸ್ಪ್ರೆಸ್ ರೈಲಿಗೆ ಉದ್ದೇಶ ಪೂರ್ವಕವಾಗಿ ಬೆಂಕಿ ಹಚ್ಚಿರೋ ಶಂಕೆ ವ್ಯಕ್ತವಾಗಿದ್ದು, ಶ್ವಾನದಳ ಮೂಲಕ ಪೊಲೀಸ್ ಇಲಾಖೆ ತಪಾಸಣೆ ನಡೆಸಿದೆ, 3ನೇ ಪ್ಲಾಟ್ಫಾರಂಗೆ ಬರಬೇಕಿದ್ದ ಎಲ್ಲಾ ರೈಲುಗಳ ಮಾರ್ಗ ಬದಲಾವಣೆ ಮಾಡಲಾಗಿದ್ದು ಮೂರು ಬೋಗಿಗಳನ್ನು ಗ್ಯಾರೇಜ್‌ಗೆ ಸ್ಥಳಾಂತರ ಮಾಡಲಾಗುತ್ತಿದೆ.
ಇದನ್ನೂ ಓದಿ: ಬೆಳ್ಳಂಬೆಳಗ್ಗೆ ಮೆಜೆಸ್ಟಿಕ್ ರೈಲು ನಿಲ್ದಾಣದಲ್ಲಿ ಬೆಂಕಿ!
ಮುಂಬೈನಿಂದ ಬೆಂಗಳೂರಿಗೆ ಬಂದಿದ್ದ ಉದ್ಯಾನ್ ಎಕ್ಸ್ಪ್ರೆಸ್ ರೈಲಿನಲ್ಲಿ ಕಾಣಿಸಿಕೊಂಡಿದ್ದ ಬೆಂಕಿಯಿಂದ ಇಂಜಿನ್ ಸೇರಿದಂತೆ B1, B2 ಎರಡು ಬೋಗಿಗಳಿಗೆ ಹಾನಿಯಾಗಿದೆ. ಈ ಅವಘಡದಲ್ಲಿ ಯಾವುದೇ ಪ್ರಯಾಣಿಕರಿಗೆ ಪ್ರಾಣಾಪಾಯವಾಗಿಲ್ಲ.