Monday, December 23, 2024

ಹಾಸ್ಟೆಲ್ ವಾರ್ಡನ್ ನಿಯೋಜನೆ ರದ್ದು; ವಿರೋಧ ವ್ಯಕ್ತಪಡಿಸಿದ ಬಾಲಕಿಯರು

ತುಮಕೂರು : ಹಾಸ್ಟೆಲ್ ವಾರ್ಡನ್ ನಿಯೋಜನೆ ರದ್ದುಗೊಳಿಸಿರುವ ಹಿನ್ನೆಲೆ ಪ್ರತಿಭಟನೆ ಮಾಡುತ್ತಿರುವ ವಿದ್ಯಾರ್ಥಿನಿಯರು ಘಟನೆ ಜಿಲ್ಲೆಯ ಮಧುಗಿರಿ ಸಮಾಜ ಕಲ್ಯಾಣ ಇಲಾಖೆ ಎದುರು ಪ್ರತಿಭಟನೆ.

ವಾರ್ಡನ್ ಜಯಮ್ಮ ಅವರನ್ನು ಶಿರಾದಿಂದ ನಾಲ್ಕು ವರ್ಷಗಳ ಹಿಂದೆ ಮಧುಗಿರಿಗೆ ನಿಯೋಜನೆ ಮಾಡಲಾಗಿತ್ತು. ಆದರೆ ಇದೀಗ ಮೂಲ ಸ್ಥಾನ ಶಿರಾಕ್ಕೆ ವಾಪಸ್ ಆಗುವಂತೆ ನಿಯೋಜನೆ ರದ್ದು ಮಾಡಿರುವ ಸರ್ಕಾರ. ಈ ಹಿನ್ನೆಲೆ ಬೇಸರಗೊಂಡಿರುವ ವಿದ್ಯಾರ್ಥಿನಿಯರು.

ಇದನ್ನು ಓದಿ : ಕಾಲೇಜು ವಿದ್ಯಾರ್ಥಿಗಳಿಗೆ ಗಾಂಜಾ ಮಾರಾಟ ; ಮೂವರು ಆರೋಪಿಗಳ ಬಂಧನ

ಬಳಿಕ ಮಧುಗಿರಿ ಪಟ್ಟಣದ ಮೆಟ್ರಿಕ್ ಬಾಲಕಿ ವಿದ್ಯಾರ್ಥಿಗಳು ಸರ್ಕಾರದ ತಿರ್ಮಾನದ ಬಗ್ಗೆ ವಿರೋಧವನ್ನು ವ್ಯಕ್ತಪಡಿಸಿದ್ದಾರೆ. ಬಾಲಕಿಯರು ವಿರೋಧ ವ್ಯಕ್ತಪಡಿಸಿದಲ್ಲದೆ, ವಾರ್ಡನ್ ನಿಯೋಜನೆ (ವರ್ಗಾವಣೆ) ಬೇಡ, ಜಯಮ್ಮನೇ ಇರಲಿ ಎಂದು ಪಟ್ಟು ಹಿಡಿದು ಪ್ರತಿಭಟನೆ ಮಾಡುತ್ತಿದ್ದಾರೆ.

RELATED ARTICLES

Related Articles

TRENDING ARTICLES