Wednesday, January 22, 2025

ಅಕ್ರಮ ಗೋ ಮಾಂಸ ಅಂಗಡಿ ಮೇಲೆ ದಾಳಿ ; 70 ರಿಂದ 80 ಕೆಜಿ ಮಾಂಸ ವಶ

ತುಮಕೂರು : ಅಕ್ರಮವಾಗಿ ಗೋ ಮಾಂಸ ಮಾರಾಟ ಮಾಡುತ್ತಿದ್ದ ಅಂಗಡಿಗಳ ಮೇಲೆ ದಾಳಿ ಮಾಡಿದ ಪೋಲಿಸರು ಘಟನೆ ಜಿಲ್ಲೆಯ ಮರಳೂರುದಿಣ್ಣೆಯಲ್ಲಿ ನಡೆದಿದೆ.

ನಗರದ ಮರಳೂರುದಿಣ್ಣೆಯ ಮಾಂಸದ ಅಂಗಡಿಗಳಲ್ಲಿ ಅಕ್ರಮವಾಗಿ ಗೋ ಮಾಂಸ ಮಾರಾಟ ಮಾಡುತ್ತಿದ್ದರು. ಈ ಹಿನ್ನೆಲೆ ಖಚಿತ ಮಾಹಿತಿ ತಿಳಿದಿದ್ದು, ಮಾಂಸದ ಅಂಗಡಿಗಳ ಮೇಲೆ ದಾಳಿ ಮಾಡಿದ ಜಯನಗರ ಪೋಲಿಸರು.

ಇದನ್ನು ಓದಿ : ಆಸ್ಪತ್ರೆಗಳಲ್ಲಿ ರೇಬಿಸ್​ ರೋಗಿಗಳ ಸಂಖ್ಯೆ ಏರಿಕೆ!

ಈ ವೇಳೆ ಗೋ ಮಾಂಸ ಮಾಡುತ್ತಿದ್ದ ಅಂಗಡಿಯನ್ನು ಮುಚ್ಚಿಸ ಬೇಡಿ ಎಂದು ಸ್ಥಳಿಯರು ವಿರೋಧ ವ್ಯಕ್ತಪಡಿಸಿದರು. ಆದ್ರು ಸಹ ಅಂಗಡಿಗಳ ಬಾಗಿಲು ಮುಚ್ಚಿಸಿ, ಮಾಂಸ ಅಂಗಡಿಗಳಿಂದ 70-80 ಕೆಜಿ ಗೋ ಮಾಂಸ ವಶಕ್ಕೆ ಪಡೆದ ಪೋಲಿಸರು. ಸದ್ಯ ಜಯನಗರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES

Related Articles

TRENDING ARTICLES