ಕೇರಳ : ಹಂದಿಗಳಲ್ಲಿ ಆಫ್ರಿಕನ್ ಜ್ವರ ಕಂಡುಬಂದಿರುವ ಕಾರಣ ಎರಡು ಫಾರ್ಮ್ ಗಳಲ್ಲಿರುವ ಎಲ್ಲಾ ಹಂದಿಗಳನ್ನು ಕೊಲ್ಲುವಂತೆ ಜಿಲ್ಲಾಧಿಕಾರಿಗಳು ಸೂಚನೆ ನೀಡಿರುವ ಘಟನೆ ಕೇರಳದ ಕಣ್ಣೂರು ಜಿಲ್ಲೆಯ ಕಣಿಚಾರ್ ಗ್ರಾಮದಲ್ಲಿ ನಡೆದಿದೆ.
ಮಲಯಂಪಾಡು ವಿನಲ್ಲಿ ಹಂದಿಗಳಿಗೆ ಆಫ್ರಿಕನ್ ಜ್ವರ ಬಂದಿರುವುದನ್ನು ಪಶುಸಂಗೋಪನಾ ಇಲಾಖೆ ಧೃಡಪಡಿಸಿದೆ. ಮತ್ತು ಹತ್ತು ಕಿ.ಮೀ ವ್ಯಾಪ್ತಿಯಲ್ಲಿ ಮತ್ತೊಂದು ಫಾರ್ಮ್ನಲ್ಲೂ ಹಂದಿಜ್ವರ ಬಂದಿದೆ ಈ ಜ್ವರವು ವ್ಯಾಪಕವಾಗಿ ಹರಡುವ ಭಯ ಇದ್ದು ಬೇರೆ ಹಂದಿಗಳಿಗೆ ಹರಡುವ ಮೊದಲೇ ಕ್ರಮಕ್ಕೆ ಮುಂದಾದ ಇಲ್ಲಿನ ಜಿಲ್ಲಾಡಳಿತ ಹಂದಿಗಳನ್ನು ಕೊಲ್ಲುವಂತೆ ಸೂಚನೆ ನೀಡಿದ್ದು ಶಿಷ್ಠಾಚಾರದ ಪ್ರಕಾರ ಸುಡದೇ ಮಣ್ಣಿನಲ್ಲಿ ಹೂಳುವಂತೆ ತಿಳಿಸಿದೆ.
ಇಲ್ಲಿನ ಹಂದಿ ಸಾಕಾಣಿಕೆ ಕೇಂದ್ರದ 10 ಕಿ.ಮಿ ವ್ಯಾಪ್ತಿಯಲ್ಲಿ ಹಂದಿ ಮತ್ತು ಮಾಂಸ ಮಾರಾಟ, ವಿತರಣೆ ಮಾಡುವುದನ್ನು ಸಂಪೂರ್ಣ ನಿಷೇಧಿಸಿದೆ.