Wednesday, January 22, 2025

ಆಸ್ತಿಗಾಗಿ ಉಪ್ಪಿಟ್ಟಿನಲ್ಲಿ ವಿಷಬೆರೆಸಿ ಗಂಡನಿಗೆ ತಿನಿಸಿದ ಐನಾತಿ ಹೆಂಡತಿ!

ಬೆಳಗಾವಿ : ಆಸ್ತಿಗಾಗಿ ಉಪ್ಪಿಟ್ಟಿನಲ್ಲಿ ವಿಷ ಬೆರೆಸಿ  ಪತ್ನಿಯೆ ಪತಿಯನ್ನು ಕೊಲ್ಲಲು ಯತ್ನಿಸಿದ ನೀಚಕೃತ್ಯವೊಂದು ಸವದತ್ತಿ ತಾಲೂಕಿನ ಗೊರೇಬಾಳ ಗ್ರಾಮದಲ್ಲಿ ನಡೆದಿದೆ.

ಉಪ್ಪಿಟ್ಟು ತಿಂದು ಅಸ್ವಸ್ಥನಾದ ಗಂಡ ನಿಂಗಪ್ಪ , ಉಪ್ಪಿಟ್ಟಿನಲ್ಲಿ ವಿಷಹಾಕಿ ಪತಿಯನ್ನು ಕೊಲ್ಲಲು ಯತ್ನಿಸಿದ ಪತ್ನಿ ಸಾವಕ್ಕ ಸದ್ಯ ಪೊಲೀಸರ ಅತಿಥಿಗಳಾಗಿದ್ದಾರೆ.

ಆಸ್ತಿಗಾಗಿ ಸಾವಕ್ಕ ತನ್ನ ಸಹೋದರ ಫಕೀರಪ್ಪ ಮಾತು ಕೇಳಿ ಗಂಡನ ಕೊಲೆಗೆ  ಪ್ಲಾನ್​ ಮಾಡಿ, ಮನೆಯಲ್ಲಿ ಮಾಡಿದ್ದ ಉಪ್ಪಿಟ್ಟಿಗೆ ವಿಷ ಬೆರೆಸಿ ಬಡಿಸಿದ್ದಾಳೆ, ಈ ಉಪ್ಪಿಟ್ಟು ತಿಂದು ಅಸ್ವಸ್ಥನಾದ ಪತಿ ನಿಂಗಪ್ಪ ಚಿಕಿತ್ಸೆಗೆಂದು ಕಿಮ್ಸ್​ ಗೆ ದಾಖಲಾಗಿದ್ದಾರೆ.

ಇತ್ತ ಗಂಡ ಕಿಮ್ಸ್​ಗೆ ದಾಖಲಾಗುತ್ತಲೇ ಐನಾತಿ ಸಾವಕ್ಕ ಅನುಮಾನ ಬಾರದಂತೆ ಉಪ್ಪಿಟ್ಟು ತಿಪ್ಪೆಗೆಸೆದಿದ್ದಾಳೆ. ಈ ಉಪ್ಪಿಟ್ಟನ್ನು ತಿಂದ ಒಂದು ಬೆಕ್ಕು ಮತ್ತು ನಾಯಿ ಸಾವಿಗೀಡಾಗಿದೆ.

ಸದ್ಯ ಈ ಪ್ರಕರಣವು ಸವದತ್ತಿ ಠಾಣೆಯಲ್ಲಿ ದೂರು ದಾಖಲಾಗಿದ್ದು, ಆರೋಪಿಗಳಾದ ಫಕೀರಪ್ಪ ಹಾಗೂ ಸಾವಕ್ಕಳನ್ನು ಪೊಲೀಸರು ಬಂಧಿಸಿದ್ದಾರೆ.

 

RELATED ARTICLES

Related Articles

TRENDING ARTICLES