ಬೆಂಗಳೂರು : ರಾಜ್ಯದಲ್ಲಿ ಗಂಭಿರ ಕಾಯಿಲೆ ನಿವಾರಣೆಯ ಔಷಧಿಗಳ ಕೊರತೆಗೆ ಬ್ರೇಕ್ ಹಾಕಲು ಇಲಾಖೆ ಸಜ್ಜಾಗಿದ್ದು ಆಗಸ್ಟ್ ತಿಂಗಳ ಕೊನೆಯಲ್ಲಿ ಟೆಂಟರ್ ಪ್ರಕ್ರಿಯೆ ಪೂರ್ಣಗೊಳ್ಳಲಿದೆ ಎಂದು ಆರೋಗ್ಯ ಇಲಾಖೆಯ ಆಯುಕ್ತರಾದ ರಂದೀಪ್ ತಿಳಿಸಿದರು.
ನಗರದ ಆರೋಗ್ಯ ಇಲಾಖೆ ಕಚೇರಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಔಷಧಿ ಕೊರತೆ ನೀಗಿಸಲು ಈಗಾಗಲೇ ಭಾರಿ ಟೆಂಡರ್ ಕರೆಯಲಾಗಿದ್ದು ಟೆಂಡರ್ ಪ್ರಕ್ರಿಯೆ ಫೈನಲ್ ಆಗದ ಕಾರಣ ಔಷಧಿ ಕೊರತೆಯ ಉಂಟಾಗುತ್ತಿದೆ,
ಇದನ್ನೂ ಓದಿ: ಪತ್ನಿಯನ್ನು ನೆನೆದು ಭಾವುಕ ಪದಗಳ ವಿಡಿಯೋ ಹಂಚಿಕೊಂಡ ನಟ ವಿಜಯ್ ರಾಘವೇಂದ್ರ!
ಸೆಪ್ಟೆಂಬರ್ 10 ರೊಳಗೆ ಔಷಧಿ ಅಭಾವ ನಿವಾರಣೆಯಾಗಲಿದ್ದು ಸದ್ಯ 700 ಬಗೆಯ ಔಷಧಿಗಳ ಟೆಂಡರ್ ಗೆ ಚಾಲನೆ ನೀಡಲಾಗಿದ್ದು ಈ ಪೈಕಿ 150 ಬಗೆಯ ಔಷಧಿಗಳ ಟೆಂಡರ್ ಗೆ ಬಿಡ್ ಬರದೇ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ ಹೀಗಾಗಿ ಮತ್ತೊಮ್ಮೆ ಟೆಂಡರ್ ಕರೆಯಲು ಸಿದ್ದತೆ ಮಾಡಿಕೊಳ್ಳಲಾಗಿದೆ.
ಎರಡನೇ ಹಂತದಲ್ಲಿ 200 ಬಗೆಯ ಔಷಧಿಗಳ ಟೆಂಡರ್ ಪ್ರಕ್ರಿಯೆ ಮುಂದುವರೆಯಲಿದೆ, ಆಗಸ್ಟ್ ಕೊನೆಯ ವಾರದಲ್ಲಿ ಶೇ 80-90ರಷ್ಟು ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸಲು KSMSCL- ಕರ್ನಾಟಕ ರಾಜ್ಯ ವೈದ್ಯಕೀಯ ಸರಬರಾಜು ನಿಗಮ ನಿಯಮಿತ ಇಲಾಖೆಯಿಂದ ಸೂಚನೆ ನೀಡಿದ್ದು ಸೆಪ್ಟೆಂಬರ್ 10ರೊಳಗೆ ಎಲ್ಲಾ ಔಷಧಿಗಳ ಟೆಂಡರ್ ಪೂರ್ಣಗೊಳ್ಳುವ ಸಾಧ್ಯತೆ ಇದೆ ಎಂದು ಅವರು ತಿಳಿಸಿದ್ದಾರೆ.