Friday, December 27, 2024

ಜಿಲ್ಲೆಯ 13 ಸರ್ಕಾರಿ ಶಾಲೆಗಳ ಬಾಗಿಲು ಬಂದ್!

ಚಾಮರಾಜನಗರ : ಜಿಲ್ಲೆಯ ಸರ್ಕಾರಿ ಶಾಲೆಗಳಲ್ಲಿ ಶೂನ್ಯ ದಾಖಲಾತಿ ಹಿನ್ನೆಲೆ 13 ಶಾಲೆಗಳಿಗೆ ಬೀಗ ಜಡಿದ ಶಿಕ್ಷಣ ಇಲಾಖೆ.

ಈಗಿನ ದಿನಗಳಲ್ಲಿ ಸರ್ಕಾರಿ ಶಾಲೆಗಳಿಗೆ ಮಕ್ಕಳನ್ನು ಸೇರಿಸದ ಪೋಷಕರು. ಅದರ ಬೆನ್ನಲ್ಲೇ ಜಿಲ್ಲೆಯ ಸರ್ಕಾರಿ ಶಾಲೆಗಳಲ್ಲಿ ಕಟ್ಟಡಗಳ ದುರಸ್ಥಿ ಹಾಗೂ ಮೂಲಭೂತ ಸೌಕರ್ಯಗಳ ಕೊರತೆ ಹಿನ್ನೆಲೆ ಸರ್ಕಾರಿ ಶಾಲೆಗಳ ಕಡೆ ಮುಖ ಮಾಡದ ವಿದ್ಯಾರ್ಥಿಗಳು.

ಇದನ್ನು ಓದಿ : ಶ್ರಾವಣ ಶುಕ್ರವಾರ ; ಇಂದು ಈ ರಾಶಿಯವರಿಗೆ ಲಕ್ಷ್ಮೀ ಒಲಿಯುತ್ತಾಳೆ..!

ಮಾಹಿತಿ ಪ್ರಕಾರ 2 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಸರ್ಕಾರಿ ಶಾಲೆಯಿಂದ ದೂರ ಉಳಿದಿದ್ದಾರೆ. ಅದರಿಂದ ಶಾಲೆಗಳಲ್ಲಿ ಶೂನ್ಯ ದಾಖಲಾತಿ ಇರುವುದರಿಂದ ಗಡಿ ಜಿಲ್ಲೆಯ ಚಾಮರಾಜನಗರದಲ್ಲಿ ಬರೋಬ್ಬರಿ 13 ಸರ್ಕಾರಿ ಶಾಲೆಗಳಿಗೆ ಬೀಗ ಹಾಕಿದ ಶಿಕ್ಷಣ ಇಲಾಖೆ. ಇದೇ ರೀತಿ ಆದರೆ ಅಳಿವಿನಂಚಿನಲ್ಲಿರುವ ಸರ್ಕಾರಿ ಶಾಲೆಗಳಿಗೆ ಪುನಶ್ಚೇತನ ಸಿಗೋದು ಯಾವಾಗ?

ಬರಿ ಬಾಯಿ ಮಾತಿಗೆ ಸರ್ಕಾರಿ ಶಾಲೆಗಳನ್ನು ಉಳಿಸಿ ಬೆಳಸಿ ಎಂದು ಭಾಷಣ ಮಾಡುವ ಸರ್ಕಾರ. ಅದನ್ನು ಬಿಟ್ಟು ಶಾಲೆಗಳನ್ನು ಉಳಿಸಿಕೊಳ್ಳುವ ಪ್ರಯತ್ನ ಕೂಡ ಮಾಡಬೇಕು, ಶಿಕ್ಷಣ ಸಚಿವರೇ ಗಡಿ ಜಿಲ್ಲೆಗಳತ್ತ ಗಮನಹರಿಸಿ ಎನ್ನುವ ಕೂಗು ಕೇಳಿಬರುತ್ತಿದೆ.

RELATED ARTICLES

Related Articles

TRENDING ARTICLES