Friday, December 27, 2024

ಶ್ರಾವಣ ಶುಕ್ರವಾರ ; ಇಂದು ಈ ರಾಶಿಯವರಿಗೆ ಲಕ್ಷ್ಮೀ ಒಲಿಯುತ್ತಾಳೆ..!

ದಿನಭವಿಷ್ಯ : ಶ್ರಾವಣ ಶುಕ್ರವಾರವಾದ ಈ ದಿನ ಚಂದ್ರನು ಸಿಂಹರಾಶಿಯಲ್ಲಿ ಸಾಗುತ್ತಾನೆ. ಇಂದು ಈ ರಾಶಿಯವರಿಗೆ ಲಕ್ಷ್ಮೀಯೇ ಒಲಿಯುತ್ತಾಳೆ. ಹಾಗದರೇ ಯಾವ ರಾಶಿಯವರಿಗೆ ಇಂದು ಲಕ್ಷ್ಮೀ ಒಲಿದು ಬರುತ್ತಾಳೆ ಎಂದು ಈ ರಾಶಿ ಭವಿಷ್ಯದಲ್ಲಿ ತಿಳಿದುಕೊಳ್ಳಿ.

ಮೇಷ ರಾಶಿ : ಇಂದು ನಿಮ್ಮ ಸ್ನೇಹಿತರಿಗೆ ನಿಮ್ಮ ಸಹಾಯಬೇಕಾಗಬಹುದು. ಹಾಗೂ ನಿಮ್ಮ ಕುಟುಂಬ ಜೀವನವು ಆಹ್ಲಾದಕರವಾಗಿರುತ್ತದೆ. ನಿಮ್ಮ ಕೆಲಸದ ಪರವಾಗಿ ಬದಲಾವಣೆಗಳು ನಡೆಯುತ್ತವೆ, ಅದು ನಿಮ್ಮ ಭವಿಷ್ಯದಲ್ಲಿ ಪ್ರಯೋಜನವನ್ನು ನೀಡುತ್ತದೆ.

ಇದನ್ನು ಓದಿ : 40% ಆರೋಪಕ್ಕೆ ಸಿಕ್ತು ‘ಪವರ್’ ಫುಲ್ ಸಾಕ್ಷ್ಯ : ದಾಖಲೆ ಸಮೇತ ಲಂಚಾವತಾರ ಬಯಲು

ವೃಷಭ ರಾಶಿ : ಇಂದು ನಿಮ್ಮ ಮನೆಗೆ ಬರುವ ಅತಿಥಿಗಳಿಂದ ನಿಮಗೆ ಹೆಚ್ಚಿನ ಕೆಲಸಗಳಾಗಬಹುದು. ಆದರೆ ನೀವು ತುಂಬಾ ಸಂತೋಷವಾಗಿರುತ್ತೀರಿ. ಉನ್ನತ ಅಧಿಕಾರಿಗಳ ಅನುಗ್ರಹದಿಂದ ನೀವು ಕ್ಷೇತ್ರದಲ್ಲಿ ಮುಂದುವರೆಯುವಿರಿ. ಅರಳಿ ಮರಕ್ಕೆ ನೀರನ್ನು ಹಾಕಿ ಲಕ್ಷೀ ಸ್ರೋತ್ರವನ್ನು ಪಠಿಸಿ.

ಮಿಥುನ ರಾಶಿ : ಉನ್ನತ ಅಧಿಕಾರಿಗಳಿಂದ ನಿಮಗೆ, ಇಂದು ಕೆಲವು ಜವಬ್ದಾರಿ ಅಥವಾ ಕೆಲಸಗಳನ್ನು ವಹಿಸಿಕೊಡಬಹುದು. ನೀವು ತುಂಬಾ ದಿನಗಳಿಂದ ಭೇಟಿಯಾಗಲು ಬಯಸುತ್ತಿದ್ದ ಸ್ನೇಹಿತರನ್ನು ಈ ದಿನ ಭೇಟಿಯಾಗುವಿರಿ. ತಾಯಿಯಿಂದ ವಾತ್ಸಲ್ಯ ಮತ್ತು ಆರ್ಶಿವಾದ ಪಡೆಯುತ್ತೀರಿ.

ಕಟಕ ರಾಶಿ : ಇಂದು ವಿವಾಹಿತರಿಗೆ ವಿವಾಹ ಪ್ರಸ್ತಾಪ ಬರಬಹುದು. ದೂರದಲ್ಲಿ ಇರುವ ಬಂಧು ಮಿತ್ರರೊಡನೆ ಮಾತನಾಡಿದಾಗ ಮನಸ್ಸು ಪ್ರಸನ್ನವಾಗಿರುತ್ತದೆ. ಇಂದು ಆರ್ಥಿಕ ದೃಷ್ಟಿಯಿಂದ ಮಾಡಿದ ಕೆಲಸದಿಂದ ಯಶಸ್ಸನ್ನು ಪಡೆಯುವಿರಿ.

ಸಿಂಹ ರಾಶಿ : ನಿಮ್ಮ ಮಗುವಿನ ಯಾವುದೇ ಸಮಸ್ಯೆ ಪರಿಹರಿಸಲು ಹಣ ಮತ್ತು ಸಮಯವನ್ನು  ವ್ಯಯಿಸುತ್ತೀರಿ. ಇಂದು ಕೆಸಗಳನ್ನು ಪೂರ್ಣಗೊಳಿಸುವುದರಿಂದ ಸಂತೋಷವಾಗಿರುತ್ತೀರಿ. ಈ ದಿನ ಹೊಟ್ಟೆ ನೋವು ಸಮಸ್ಯೆ ಅಥವಾ ಯಾವುದೇ ಹೊಟ್ಟೆ ಸಮಸ್ಯೆ ಇರಬಹುದು.

ಕನ್ಯಾ ರಾಶಿ : ಪ್ರತಿಕೂಲ ಸಂದರ್ಭಗಳು ಉದ್ಭವಿಸಿದಾಗ ನಿಮ್ಮ ಕೋಪವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಿ, ಇಲ್ಲವಾದರೆ ನಿಮ್ಮ ಸಂಬಂಧದಲ್ಲಿ ಬಿರುಕು ಮೂಡುತ್ತದೆ. ಸಂಜೆ ವ್ಯಾಪಾರದಲ್ಲಿ ಹಠಾತ್ ಹಣದಲ್ಲಿ ಲಾಭವಾಗಬಹುದು.

ತುಲಾ ರಾಶಿ : ಅವಾಮಾನವೂ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರಬಹುದು, ಆದ್ದರಿಂದ ಆರೋಗ್ಯ ವಿಷಯಗಳಲ್ಲಿ ಅಪಾಯಗಳನ್ನು ತಪ್ಪಿಸಿಕೊಳ್ಳಬೇಕು. ಇಂದು ನಿಮ್ಮ ಸಂಗಾತಿಯ ಬೆಂಬಲವನ್ನು ಪಡೆಯುತ್ತೀರಿ.

ವೃಶ್ಚಿಕ ರಾಶಿ : ಮನೆಯಲ್ಲಿ ಮತ್ತು ಕೆಲಸದಲ್ಲಿ ಮಾತಿನ ಮೇಲೆ ನಿಯಂತ್ರಣವನ್ನು ಹೊಂದಿರಬೇಕು. ಇದನ್ನು ಮಾಡದಿದ್ದರೆ ಪ್ರತಿಕೂಲ ಸಮಸ್ಯೆಗಳನ್ನು ಹೆದುರಿಸ ಬೇಕಾಗುತ್ತದೆ. ಇಂದು ವಾಹನಗಳನ್ನು ಓಡಿಸುವಾಗ ಜಾಗುರೂಕರಾಗಿರಬೇಕು.

ಧನು ರಾಶಿ : ಅನಗತ್ಯ ವೆಚ್ಚಗಳಿಂದ ಬಜೆಟ್ ಮೇಲೆ ಪರಿಣಾಮ ಬೀರುತ್ತದೆ. ನೀವು ಪ್ರೀತಿಪಾತ್ರರೊಡನೆ ಹಣದ ವ್ಯವಹಾರ ಮಾಡಲು ಹೋದರೆ, ಬಹಳ ಎಚ್ಚರಿಕೆಯಿಂದ ಅದನ್ನು ನಿಭಾಯಿಸಿ. ಏಕೆಂದರೆ ನಿಮ್ಮ ಹಣವು ಸಿಲುಕಿಕೊಳ್ಳಬಹುದು.

ಮಕರ ರಾಶಿ : ನ್ಯಾಯಾಲಯದ ವಿಷಯಗಳಲ್ಲಿ ನೀವು ಯಶಸ್ವಿಯಾಗುವಿರಿ. ಕುಟುಂಬದಲ್ಲಿ ಯಾವುದೇ ಸಮಸ್ಯೆ ನಡೆಯುತ್ತಿದ್ದರು ಇಂದು ಕೊನೆಗೊಳ್ಳುತ್ತದೆ ಮತ್ತು ನೀವು ನೆಮ್ಮದಿಯ ನಿಟ್ಟುಸಿರು ಬೀಡುತ್ತಿರಿ. ಜೀವನ ಸಂಗಾತಿಯ ಸಹಕಾರದಿಂದ ಮನಸ್ಸಿನಲ್ಲಿ ನೆಮ್ಮದಿ ಸಿಗುತ್ತದೆ.

ಕುಂಭ ರಾಶಿ : ಇಂದು ನೀವು ಕಚೇರಿಯಲ್ಲಿ ನಿಮ್ಮ ಸ್ವಂತ ವ್ಯವಹಾರವನ್ನು ಗಮನದಲ್ಲಿ ಇಟ್ಟುಕೊಳ್ಳಬೇಕು, ಇಲ್ಲಿಯ ವಿಷಯಗಳಲ್ಲಿ ಜಾಗೃಕರಾಗಿರಬೇಕು ಇಲ್ಲದಿದ್ದರೆ ಅಧಿಕಾರಿಗಳು ಕೋಪಗೊಳ್ಳುತ್ತಾರೆ. ನಿಮ್ಮ ತಾಯಿಯು ಯಾವುದೇ ದೈಹಿಕ ಸಮಸ್ಯೆಯಿಂದ ಬಳಲುತ್ತಿದ್ದರೆ, ಆಕೆಯ ನೋವು ಹೆಚ್ಚಾಗಬಹುದು.

ಮೀನ ರಾಶಿ : ವಿದ್ಯಾರ್ಥಿಗಳು ಯಾವುದೇ ಸ್ಪರ್ಧೆಗಾಗಿ ಅರ್ಜಿ ಭರ್ತಿ ಮಾಡಲು ಬಯಸಿದರೆ ಅವರು ಇಂದು ಭರ್ತಿ ಮಾಡಬಹುದು. ಈ ದಿನ ಯಾವುದೇ ಕೆಲಸ ಮಾಡಿದರೆ ಅದನ್ನು ಪೂರ್ಣ ಪರಿಶ್ರಮದಿಂದ ಮಾಡಿ, ಅದೃಷ್ಟಕ್ಕೆ ಬಿಡಬೇಡಿ. ನಿಮಗೆ ಯಶಸ್ಸು ಸಿಗುತ್ತದೆ.

 

RELATED ARTICLES

Related Articles

TRENDING ARTICLES