Wednesday, January 22, 2025

ಸ್ನೇಹಿತನ ಪತ್ನಿ ಜೊತೆ ಕಾಮದಾಟ: ಅಚಾನಕ್ಕಾಗಿ ಬಂದ ಅಪ್ರಾಪ್ತೆ ಮೇಲೆ ಅತ್ಯಾಚಾರ!

ಮಂಗಳೂರು : ಸ್ನೇಹಿತನ ಪತ್ನಿ ಜೊತೆ ಕಾಮದಾಟದಲ್ಲಿದ್ದ ವೇಳೆ ಅಚಾನಕ್ಕಾಗಿ ಬಂದ ಅಪ್ರಾಪ್ತೆ ಮೇಲೇಯೇ ಅತ್ಯಾಚಾರ ನಡೆಸಿದ ಘನಘೋರ ಕೃತ್ಯ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಡೆದಿದೆ.

ಕಾಸರಗೋಡಿನಿಂದ ವಾಪಾಸ್​ ಆಗುವಾಗ ಅಪಘಾತದಲ್ಲಿ ಬಿದ್ದು ಗಾಯಗೊಂಡ ಮನ್ಸೂರ್​ ಅಹ್ಮದ್ ಮತ್ತು ಹಲೀಂ ​ ನಗರದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು, ಇದೇ ವೇಳೇ ಪತಿಯ ಯೋಗಕ್ಷೇಮ ವಿಚಾರಿಸಲು ಮನ್ಸೂರ್​ ಅಹ್ಮದ್​ ಪತ್ನಿ ಶಮೀನಾ ಬಾನು ಬಂದಿದ್ದರು, ಪಕ್ಕದ ಬೆಡ್​ ಮೇಲೆ ತನ್ನ ಸ್ನೇಹಿತ ಮಲಗಿದ್ದಾಗಲೇ ಮನ್ಸೂರ್​ ಸ್ನೇಹಿತ ಅಬ್ದುಲ್ ಹಲೀಂ ಶಮೀನಾ ಬಾನು ಜೊತೆ ಕಾಮಕೇಳಿಯಲ್ಲಿ ತೊಡಗಿದ್ದರು.

ಇದನ್ನೂ ಓದಿ: ‘ಕ್ಷೇತ್ರಪತಿ’ ಮಾಡ್ರನ್​ ‘ಬಂಗಾರದ ಮನುಷ್ಯ’: ಅನ್ನ ತಿನ್ನೋರೆಲ್ಲಾ ಮಿಸ್​ ಮಾಡ್ದೆ ನೋಡಿ

ಇದೇ ವೇಳೆ ಅಚಾನಕ್ಕಾಗಿ ಒಳಗೆ ಬಂದ ಅಪ್ರಾಪ್ತೆ ಹೆಣ್ಣು ಮಗುವಿನ ಮೇಲೆ ಮನ್ಸೂರ್​ ಪತ್ನಿ ಸಹಕಾರದೊಂದಿಗೆ ಹಲೀಂ ಲೈಂಗಿಕ ದೌರ್ಜನ್ಯವೆಸಗಿ ಅತ್ಯಾಚಾರ ಮಾಡಿದ್ದಾನೆ ಎಂದು ಅತ್ಯಾಚಾರಕ್ಕೊಳಗಾದ ಅಪ್ರಾಪ್ತೆ ತಾಯಿ ದೂರಿದ್ದಾರೆ.

ಅತ್ಯಾಚಾರ ಬಳಿಕ ಹೆದರಿ ಆಸ್ಪತ್ರೆಯಿಂದ ಆರೋಪಿಗಳು ಪರಾರಿಯಾಗಿದ್ದಾರೆ, ಘಟನೆ ಬಳಿಕ ಬಾಲಕಿ ತಾಯಿ ಮಹಿಳಾ ಠಾಣೆಗೆ ದೂರನ್ನು ನೀಡಿದ್ದಾರೆ, ಆರೋಪಿಗಳ ಬಗ್ಗೆ ಖಚಿತ ಮಾಹಿತಿ ಮೇರೆಗೆ ಗೋವಾಗೆ ಎಸ್ಕೇಪ್‌ ಆಗ್ತಿದ್ದಾಗ  ಅಬ್ದುಲ್, ಶಮೀನಾ ರನ್ನು ಪೋಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

RELATED ARTICLES

Related Articles

TRENDING ARTICLES