Sunday, December 22, 2024

ಎರಡು ಕೋಮಿನ ವಿದ್ಯಾರ್ಥಿಗಳ ಮಧ್ಯೆ ಮಾರಾಮಾರಿ ; ಮೂವರಿಗೆ ಗಂಭೀರ ಗಾಯ

ಯಾದಗಿರಿ : ಕ್ಷುಲಕ ಕಾರಣಕ್ಕೆ ಕೋಮಿನ ವಿದ್ಯಾರ್ಥಿಗಳ ಮಧ್ಯೆ ಮಾರಾಮಾರಿ ಹಿನ್ನೆಲೆ ಘಟನೆಯಲ್ಲಿ ಮೂವರು ವಿದ್ಯಾರ್ಥಿಗಳಿಗೆ ಗಂಭೀರ ಗಾಯ ಘಟನೆ ಜಿಲ್ಲೆಯ ಸೈದಾಪುರ ಪಟ್ಟಣದ ಸರ್ಕಾರಿ ಕೈಗಾರಿಕಾ ಉಪಕರಣಾಗಾರ ಕಾಲೇಜಿನಲ್ಲಿ ನಡೆದಿದೆ.

ಕಳೆದ ಎರಡು ದಿನಗಳ ಹಿಂದೆ ಎರಡು ಕೋಮಿನ ವಿದ್ಯಾರ್ಥಿಗಳ ಮಧ್ಯ ವಾಗ್ವಾದ ನಡೆದಿತ್ತು. ಆ ವಿಷಯ ಕಾಲೇಜಿನ ಪ್ರಾಂಶುಪಾಲರಿಗೆ ತಿಳಿದಿದ್ದು, ಎರಡು ಗುಂಪಿನ ವಿದ್ಯಾರ್ಥಿಗಳನ್ನು ಕರೆಸಿ ಬುದ್ಧಿವಾದ ಹೇಳಿದ್ದರು. ಆದ್ರೆ ನಿನ್ನೆ ಮತ್ತೇ ಕಾಲೇಜು ಅವಧಿ ಮುಗಿಸಿ ಮನೆಗೆ ತೆರಳುವ ವೇಳೆ ಪುನಃ ಗಲಾಟೆ ನಡೆದಿದೆ.

ಇದನ್ನು ಓದಿ : ಜಿಲ್ಲೆಯ 13 ಸರ್ಕಾರಿ ಶಾಲೆಗಳ ಬಾಗಿಲು ಬಂದ್!

ಗಲಾಟೆಯಲ್ಲಿ ಎರಡು ಕೋಮಿನ ವಿದ್ಯಾರ್ಥಿಗಳ ಮಧ್ಯೆ ಮಾರಾಮಾರಿ ನಡೆದಿದ್ದು, ಅನ್ಯಕೋಮಿನ ವಿದ್ಯಾರ್ಥಿಗಳಿಂದ ಒಂದು ಕೋಮಿನ ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆದಿದೆ. ಹಲ್ಲೆ ನಡೆದ ಹಿನ್ನೆಲೆ ಬಸವರಾಜ, ಮಹೇಶ್ ಮತ್ತು ಚಂದ್ರಕಾಂತ್ ಎಂಬ ಮೂವರು ವಿದ್ಯಾರ್ಥಿಗಳಿಗೆ ಗಂಭೀರ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ರಾಯಚೂರು ರಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಈ ಘಟನೆ ಸೈದಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಘಟನೆಗೆ ನಿಖರ ಕಾರಣ ತಿಳಿಯದ ಕಾರಣ,ಈವರೆಗೆ ಯಾವುದೇ ಪ್ರಕರಣ ದಾಖಲಾಗಿಲ್ಲ.

RELATED ARTICLES

Related Articles

TRENDING ARTICLES