Monday, December 23, 2024

ತಿಪಟೂರು ತಾಲೂಕು ಆಸ್ಪತ್ರೆಯಲ್ಲಿ ಕೇಳೋರಿಲ್ಲ ರೋಗಿಗಳ ಪಾಡು

ತುಮಕೂರು : ಸಾರ್ವಜನಿಕ ಆಸ್ಪತ್ರೆಯಲ್ಲಿ ವೈದ್ಯರು ಮತ್ತು ಸಿಬ್ಬಂದಿಗಳಿಲ್ಲದ ಹಿನ್ನೆಲೆ ರೋಗಿಗಳೇ ಸ್ವ ಚಿಕಿತ್ಸೆ ಮಾಡಿಕೊಳ್ಳುತ್ತಿರುವ ಘಟನೆ ಜಿಲ್ಲೆಯ ತಿಪಟೂರು ತಾಲೂಕು ಆಸ್ಪತ್ರೆಯಲ್ಲಿ ನಡೆದಿದೆ.

ತಿಪಟೂರು ಸಾರ್ವಜನಿಕ ಆಸ್ಪತ್ರೆಯಲ್ಲಿ ರೋಗಿಗಳ ಪಾಡು ದೇವರೇ ಬಲ್ಲ ಎಂಬ ಪರಿಸ್ಥಿತಿ ಎದುರಾಗಿದೆ. ಆಸ್ಪತ್ರೆಯಲ್ಲಿ ಇತ್ತ ವೈದ್ಯರು ಇಲ್ಲ, ಅತ್ತ ಸಿಬ್ಬಂದಿಗಳು ಇಲ್ಲ, ಈ ಹಿನ್ನೆಲೆ ರೋಗಿಗಳೇ ತುರ್ತು ಚಿಕಿತ್ಸಾ ಕೇಂದ್ರದಲ್ಲಿ ಪ್ರಾಥಮಿಕ ಚಿಕಿತ್ಸೆ ಮಾಡಿಕೊಳ್ಳುತ್ತಿರುವ ಗಾಯಾಳುಗಳು

ಇದನ್ನು ಓದಿ : ಅಂಡರ್ ಪಾಸ್​ನಲ್ಲಿ ಲಾಕ್ ಆದ ಗ್ಯಾಸ್ ಟ್ಯಾಂಕರ್

ಅಷ್ಟೇ ಅಲ್ಲದೆ ಕಿರು ಶಸ್ತ್ರ ಚಿಕಿತ್ಸೆ ಕೊಠಡಿಯಲ್ಲಿ ಸಿಬ್ಬಂದಿಗಳೇ ಇಲ್ಲ. ಕೆಲಸದ ಸಮಯದಲ್ಲಿ ಕಳ್ಳಾಟ ಆಡುತ್ತಿರುವ ಸಿಬ್ಬಂದಿಗಳು. ವೈದ್ಯರಿಗಾಗಿ ಓಪಿಡಿ ಚೀಟಿ ಪಡೆಯಲು ಸಾಲುಗಟ್ಟಿ ನಿಂತಿರುವ ರೋಗಿಗಳು. ಆದರೆ ಚಿಕಿತ್ಸೆ ನೀಡಲು ವೈದ್ಯರೇ ಇಲ್ಲ. ಇಂತಹ ಪರಿಸ್ಥಿತಿ ನಡೆಯುತ್ತಿದ್ದರು ಯಾವುದೇ ಕ್ರಮ ವಹಿಸದ ಅಧಿಕಾರಿಗಳು. ಸ್ವಲ್ಪ ಜವಬ್ದಾರಿ ಅನ್ನೋದು ಏನಾದರೂ ಇದ್ದರೆ ಆರೋಗ್ಯ ಸಚಿವರೇ ಇತ್ತ ಒಮ್ಮೆ ನೋಡಿ.

ತಿಪಟೂರು ತಾಲೂಕು ಆಸ್ಪತ್ರೆಯಲ್ಲಿ ಸಾರ್ವಜನಿಕರೇ ಮಾಡಿರುವ ವಿಡಿಯೋ ವೈರಲ್ ಆಗಿದೆ.

 

RELATED ARTICLES

Related Articles

TRENDING ARTICLES