Monday, December 23, 2024

40% ಆರೋಪಕ್ಕೆ ಸಿಕ್ತು ‘ಪವರ್’ ಫುಲ್ ಸಾಕ್ಷ್ಯ : ದಾಖಲೆ ಸಮೇತ ಲಂಚಾವತಾರ ಬಯಲು

ಬೆಂಗಳೂರು : ಬಿಜೆಪಿ ಸರ್ಕಾರದ ವಿರುದ್ಧ ಕಾಂಗ್ರೆಸ್​​ 40% ಕಮಿಷನ್​​​​​​ ಆರೋಪ ಮಾಡಿದ್ದು, ಇದನ್ನು ಓಟ್​ ಆಗಿ ಪರಿವರ್ತಿಸುವಲ್ಲಿ ಯಶಸ್ವಿಯಾಗಿತ್ತು. 40% ಆರೋಪಕ್ಕೆ ಬಿಜೆಪಿ ಸಾಕ್ಷ್ಯ ಕೇಳುತ್ತಲೇ ಬಂದಿತ್ತು. ಆದ್ರೆ, ಆರೋಪ ಮಾಡಿ ಸುಮ್ಮನಾಗಿದ್ದ ಕಾಂಗ್ರೆಸ್​​ ಸಾಕ್ಷ್ಯ ಒದಗಿಸಲು ವಿಫಲವಾಗಿತ್ತು. ಇದೀಗ, 40% ಕಮಿಷನ್​ಗೆ ಪವರ್​ ಟಿವಿ ಸಾಕ್ಷ್ಯ ಒದಗಿಸಿದೆ. ದಾಖಲೆ ಸಮೇತ ಕಮಿಷನ್ ಆರೋಪವನ್ನ ಸಾಬೀತು ಮಾಡಿದೆ.

ಹೌದು, ರಾಜ್ಯ ಪೊಲೀಸರು, ಸಿಐಡಿ, ಎಸ್ಐಟಿ ಪತ್ತೆ ಹಚ್ಚಲು ಸಾಧ್ಯವಾಗದ ಕಮಿಷನ್ ದಂಧೆಯ ದಾಖಲೆಗಳನ್ನು ನಿಮ್ಮ ಪವರ್ ಟಿವಿ ಭೂಗರ್ಭದಿಂದ ತೆಗೆದು ಜಗಜ್ಜಾಹೀರು ಮಾಡಿದೆ. ಇದೇ ಮೊದಲ ಬಾರಿಗೆ ಸರ್ಕಾರದ ಲಂಚಾವತಾರವನ್ನ ಜನರಿಗೆ ತೋರಿಸಿದೆ. 40% ಆರೋಪಕ್ಕೆ ಸಾಕ್ಷ್ಯ ಒದಗಿಸಿದೆ.

ರಾಜ್ಯದಲ್ಲಿ ಯಾವುದೇ ಕಾಮಗಾರಿ ನಡೆಯಬೇಕಿದ್ರೂ ಅಧಿಕಾರಿಗಳು ಮತ್ತು ಸಚಿವರು ಹಾಗೂ ಶಾಸಕರಿಗೆ ಕಮಿಷನ್​ ನೀಡಲೇ ಬೇಕು ಎಂಬ ಅಲಿಖಿತ ನಿಯಮ ಜಾರಿಯಲ್ಲಿದೆ. ಯಾವುದೇ ಪಕ್ಷ ಅಧಿಕಾರದಲ್ಲಿರಲಿ, ಗುತ್ತಿಗೆದಾರರು ಇಂತಿಷ್ಟು ಕಮಿಷನ್ ನೀಡಬೇಕು. ಇಲ್ಲದಿದ್ದರೆ ಕಾಮಗಾರಿ ಮುಗಿದ್ರೂ ಗುತ್ತಿಗೆದಾರರಿಗೆ ಹಣ ಬಿಡುಗಡೆಯಾಗಲ್ಲ.

ಶಿಕಾರಿಪುರ ಮೂಲದ ಕಾಂಟ್ರ್ಯಾಕ್ಟರ್ ಹೆಚ್.ಎಸ್​. ಷಣ್ಮುಖಪ್ಪ ಕಮಿಷನ್​ ದಂಧೆಯ ಕರಾಳ ಲೋಕ ಅನಾವರಣ ಮಾಡಿದ್ದಾರೆ. 2017ರಲ್ಲಿ ಕರ್ನಾಟಕ ನೀರಾವರಿ ನಿಗಮದಿಂದ 300 ಕೋಟಿ ಕಾಮಗಾರಿ ಟೆಂಡರ್ ಅನ್ನು ಚಂದ್ರಕಾಂತ್​​ ರಾಮಲಿಂಗಂ ಮಾಲೀಕತ್ವದ ಕಂಪನಿಗೆ ನೀಡಲಾಗಿತ್ತು. ಹೆಚ್​.ಎಸ್​. ಷಣ್ಮುಖಪ್ಪ ಎಂಬ ಗುತ್ತಿಗೆದಾರ ರಾಮಲಿಂಗಂ ಕನ್​ಸ್ಟ್ರಕ್ಷನ್ಸ್​​ ಕಂಪನಿ ಪ್ರೈವೇಟ್ ಲಿಮಿಟೆಡ್​ನಿಂದ ತುಂಡು ಗುತ್ತಿಗೆ ಪಡೆದಿದ್ರು. ಕಾಮಗಾರಿ ನಡೆಸಲು ಚಂದ್ರಕಾಂತ್​​-ಷಣ್ಮುಖಪ್ಪ ನಡುವೆ ಅಗ್ರಿಮೆಂಟ್ ಆಗಿತ್ತು. ಅಗ್ರಿಮೆಂಟ್ ಪ್ರಕಾರ ಎರಡೂ ಪ್ಯಾಕೇಜ್ ಸೇರಿ ಒಟ್ಟು ಮೊತ್ತ 13 ಕೋಟಿಯ 14 ಲಕ್ಷದ 83 ಸಾವಿರದ 436 ರೂಪಾಯಿ ಕಾಮಗಾರಿಗೆ ಒಪ್ಪಂದ​ ಮಾಡಿಕೊಳ್ಳಲಾಗಿತ್ತು.

13 ಕೋಟಿ ಕಾಮಗಾರಿ ಪ್ಯಾಕೇಜ್ ಅಗ್ರಿಮೆಂಟ್

ವ್ಯವಸ್ಥೆಯಲ್ಲಿ ಭ್ರಷ್ಟಾಚಾರ ಅನ್ನೋದು ಎಷ್ಟರ ಮಟ್ಟಿಗೆ ಇದೆ ಎಂಬುದಕ್ಕೆ ರಾಮಲಿಂಗಂ ಮತ್ತು ಷಣ್ಮುಖಪ್ಪ ನಡುವೆ ಆಗಿರುವ ಅಗ್ರಿಮೆಂಟ್ ಜ್ವಲಂತ ಸಾಕ್ಷಿ. ಉಪ ಗುತ್ತಿಗೆ ನೀಡಲು ಅಗ್ರಿಮೆಂಟ್​​ನಲ್ಲಿ ಒಟ್ಟು 55 ಪರ್ಸೆಂಟ್ ಹಣ ಕಡಿತ ಮಾಡುವ ಬಗ್ಗೆ ಸ್ಪಷ್ಟವಾಗಿ ಉಲ್ಲೇಖ ಮಾಡಲಾಗಿದೆ. 13 ಕೋಟಿ ಕಾಮಗಾರಿಯನ್ನ ಎರಡು ಪ್ಯಾಕೇಜ್ ರೂಪದಲ್ಲಿ ಅಗ್ರಿಮೆಂಟ್ ಮಾಡಿಕೊಳ್ಳಲಾಗಿದೆ. 6.5 ಕೋಟಿ ವೆಚ್ಚದಲ್ಲಿ ಎರಡು ಪ್ಯಾಕೇಜ್ ವಹಿಸಿಕೊಂಡ ಷಣ್ಮುಖಪ್ಪ ಸಾಲಸೋಲ ಮಾಡಿ ಕಾಮಗಾರಿ ಪೂರ್ಣಗೊಳಿಸಿದ್ರು. ಬಳಿಕ ಷಣ್ಮುಖಪ್ಪ, ರಾಮಲಿಂಗಂ ಬಳಿ ಹಣ ಬಿಡುಗಡೆ ಮಾಡುವಂತೆ ಕೇಳಿದ್ದಾರೆ. ಆಗ ಷಣ್ಮುಖಪ್ಪನಿಗೆ ಶಾಕ್ ಆಯ್ತು.

ಅಧಿಕಾರಿಗಳಿಗೆ 5.92 ಲಕ್ಷ ಲಂಚ

ಕಾಮಗಾರಿ ಹಣ ನೀಡುವಂತೆ ದುಂಬಾಲು ಬಿದ್ದ ಷಣ್ಮುಖಪ್ಪನಿಗೆ ರಾಮಲಿಂಗಂ ದುಡ್ಡು ನೀಡಲು ನಿರಾಕರಿಸಿದ್ದಾರೆ. ಈಗಾಗಲೇ ಸಂಬಂಧಪಟ್ಟ ಮಂತ್ರಿಗಳಿಗೆ, ಅಧಿಕಾರಿಗಳಿಗೆ 5.92 ಲಕ್ಷ ರೂಪಾಯಿ ಕಮಿಷನ್ ನೀಡಿದ್ದೇನೆ ಎಂದು ಹೇಳಿದ್ದಾರೆ. ನಿನಗೆ ಕೊಡಬೇಕಿರೋದು 60 ಲಕ್ಷ ಮಾತ್ರ ಎಂದು ಆವಾಜ್ ಹಾಕಿದ್ದಾನೆ.

ಸಿಎಂ, ಡಿಸಿಎಂಗೆ ದೂರು ಕೊಟ್ರೂ ನೋ ಯೂಸ್!

ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಕಾಮಗಾರಿ ಪೂರ್ಣಗೊಳಿಸಿದ ಷಣ್ಮುಖಪ್ಪ ಬೇರೆ ದಾರಿಯಿಲ್ಲದೆ ಸಿಎಂ, ಡಿಸಿಎಂ, ಡಿಜಿ & ಐಜಿಪಿ ಸೇರಿದಂತೆ ಬಿಬಿಎಂಪಿ ಹಾಗೂ ಬಿಡಿಎ ಕಮಿಷನರ್​​ಗೆ ದೂರು ನೀಡಿ ಪತ್ರ ಬರೆದಿದ್ದಾರೆ. ಆದ್ರೂ ಯಾವುದೇ ಪ್ರಯೋಜನವಾಗಿಲ್ಲ. ಅಂತಿಮವಾಗಿ ಷಣ್ಮುಖಪ್ಪನಿಗೆ ನಿಮ್ಮ ‘ಪವರ್ ಟಿವಿ’ ನ್ಯಾಯ ಒದಗಿಸಿದೆ. ಕಮಿಷನ್ ದಂಧೆಯನ್ನು ಬಟಾಬಯಲು ಮಾಡಿದೆ.

RELATED ARTICLES

Related Articles

TRENDING ARTICLES