Monday, December 23, 2024

ಅಂಡರ್ ಪಾಸ್​ನಲ್ಲಿ ಲಾಕ್ ಆದ ಗ್ಯಾಸ್ ಟ್ಯಾಂಕರ್

ಧಾರವಾಡ : ಲಾರಿ ಚಾಲಕನ ನಿರ್ಲಕ್ಷದಿಂದ ಅಂಡರ್ ಪಾಸ್​ನಲ್ಲಿ ಸಿಲುಕಿಕೊಂಡ ಗ್ಯಾಸ್ ಟ್ಯಾಂಕರ್ ಘಟನೆ ತಾಲೂಕಿನ ಮುಮ್ಮಿಗಟ್ಟಿ ಬಳಿ ಇರುವ ಹೈಕೋರ್ಟ್ ಅಂಡರ್ ಪಾಸ್​ನಲ್ಲಿ ನಡೆದಿದೆ.

ಲಾರಿ ಚಾಲಕನ ಬೇಜವಾಬ್ದಾರಿಯಿಂದ ಅಂಡರ್ ಪಾಸ್​ನಲ್ಲಿ ಹೋಗುವ ವೇಳೆ ಲಾಕ್ ಆದ ಗ್ಯಾಸ್ ಟ್ಯಾಂಕರ್. ಎರಡು ಘಂಟೆಯಿಂದ ರಾಷ್ಟ್ರೀಯ ಹೆದ್ದಾರಿ 4 ರಲ್ಲಿ ರಸ್ತೆ ಸ್ಥಗಿತಗೊಂಡಿತ್ತು. ಈ ಹಿನ್ನೆಲೆ ಯಾವುದೇ ಅಹಿತಕರ ಘಟನೆಗಳು ನಡೆಯಬಾರದೆಂದು ಮುಮ್ಮಿಗಟ್ಟಿ, ಬೇಲೂರು ಹಾಗೂ ಕೋಟೂರು ಗ್ರಾಮಗಳಲ್ಲಿ ವಿದ್ಯುತ್ ಸ್ಥಗಿತಗೊಳಿಸಲಾಗಿದೆ.

ಇದನ್ನು ಓದಿ : I.N.D.I.A.ಗೆ ಸ್ಟಾರ್ಟಿಂಗ್ ಟ್ರಬಲ್ : 7 ಕ್ಷೇತ್ರಗಳಲ್ಲಿ ‘ಕೈ’ ಏಕಾಂಗಿ ಸ್ಪರ್ಧೆ?

ಬಳಿಕ ಸ್ಥಳಕ್ಕೆ ಅಗ್ನಿ ಶಾಮಕ ದಳದ 10 ವಾಹನಗಳು ಆಗಮಿಸಿದವು. ಅಷ್ಟೇ ಅಲ್ಲದೆ 100 ಕ್ಕೂ ಹೆಚ್ಚು ಪೋಲಿಸರನ್ನು ನಿಯೋಜನೆ ಮಾಡಲಾಗಿದ್ದು, ಧಾರವಾಢ ಹೈಕೋರ್ಟ್​ ಸ್ಥಳದಿಂದ ಎರಡು ಕಿಲೋ ಮೀಟರ್ ಬಿಗಿ ಭದ್ರತೆ ಮಾಡಲಾಗಿದೆ. ಗರಗ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ಕಂಡುಬಂದಿದೆ.

RELATED ARTICLES

Related Articles

TRENDING ARTICLES