ಬೆಂಗಳೂರು : ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದಾಗ ಮಂಡ್ಯ ಜಿಲ್ಲೆಯ ಜನರು ನೀರು ಬಿಡುವಂತೆ ಕೇಳಿದರೆ ಕೇಂದ್ರ ಸರ್ಕಾರವನ್ನು ಕೇಳಿ ಎಂದು ಉತ್ತರ ನೀಡಿದ್ದರು, ಆಗ ಏಕೆ ಮಾತನಾಡಲಿಲ್ಲ ಎಂದು ಹೆಚ್.ಡಿ.ಕೆ ವಿರುದ್ದ ಸಚಿವ ಚಲುವರಾಯ ಸ್ವಾಮಿ ಕಿಡಿಕಾರಿದರು.
ನಗರದಲ್ಲಿ ಮಾತನಾಡಿದ ಅವರು, ಯಾವ ರಾಜ್ಯಕ್ಕೆ ಎಷ್ಟು ನೀರನ್ನು ಬಿಡಬೇಕು ಎನ್ನುವ ಕುರಿತು ಕೇಂದ್ರ ಸರ್ಕಾರ ನಿರ್ಧಾರ ಮಾಡುತ್ತದೆ. ಈ ಕುರಿತು ಕಳೆದ ಒಂದು ತಿಂಗಳಿಂದ ಕೇಂದ್ರಕ್ಕೆ ಮತ್ತು ಕಾವೇರಿ ನೀರು ಪ್ರಾಧಿಕಾರಕ್ಕೆ ನಮ್ಮ ಸರ್ಕಾರ ಸತತವಾಗಿ ಮಾಹಿತಿ ನೀಡುತ್ತಲೇ ಇದೆ.
ಇದನ್ನೂ ಓದಿ: ಡಿ.ಕೆ.ಶಿ ಮಂತ್ರಿ ಆಗಿರುವುದು ಕರ್ನಾಟಕಕ್ಕೋ ಅಥವಾ ತಮಿಳುನಾಡಿಗೋ?:ಹೆಚ್ಡಿಕೆ ಕಿಡಿ
ಈ ನಡುವೆ ತಮಿಳುನಾಡಿನವರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದು, ನಮ್ಮ ರಾಜ್ಯದ ರೈತರ ಪರವಾಗಿ ಏನು ಪ್ರಯತ್ನ ಮಾಡಬೇಕೋ ಅದನ್ನು ನಾವು ಮಾಡುತ್ತೇವೆ ಎಂದರು.
ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದಾಗ ಮಂಡ್ಯ ಜಿಲ್ಲೆಯ ಜನರು ನೀರು ಬಿಡುವಂತೆ ಕೇಳಿಕೊಂಡಿದ್ದರು. ಆಗ ಕುಮಾರಸ್ವಾಮಿ ಕೇಂದ್ರ ಸರ್ಕಾರವನ್ನ ಕೇಳಿ ಎಂದು ಹೇಳಿ ಸುಮ್ಮನಾಗಿದ್ದರು, ಆಗ ಏಕೆ ಕುಮಾರಸ್ವಾಮಿ ಮಾತನಾಡಲಿಲ್ಲ? ಅವ್ರು ಅಂದು ಹೇಳಿಕೆ ನೀಡಿರುವ ಕ್ಲಿಪ್ ಇನ್ನೂ ಇದೆ, ಅದನ್ನೂ ಹಾಕಿ ಎಂದು ಕುಮಾರಸ್ವಾಮಿ ವಿರುದ್ದ ಕಿಡಿಕಾರಿದರು.