ಬೆಂಗಳೂರು : ಬಿಬಿಎಂಪಿ ಹೊಸ ವಾರ್ಡ್ಗಳ ಮರು ವಿಂಗಡನೆ ಪ್ರಕ್ರಿಯೆಯನ್ನು ಸಮಿತಿಯು ಪೂರ್ಣಗೊಳಿಸಿದ್ದು ನೆನ್ನೆ ರಾತ್ರಿಯೇ ವಿಂಗಡಣೆ ವರದಿಯನ್ನು ಮುಖ್ಯಮಂತ್ರಿಗಳಿಗೆ ಸಲ್ಲಿಸಲಾಗಿದೆ ಎಂದು ಸಮಿತಿ ಅಧ್ಯಕ್ಷ ಹಾಗು ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ತಿಳಿಸಿದರು.
ಇದನ್ನೂ ಓದಿ: ಉಪೇಂದ್ರ ತಪ್ಪು ಒಪ್ಪಿಕೊಂಡಿದ್ದಾರೆ : ಪರಮೇಶ್ವರ್
ನಗರದಲ್ಲಿ ಮಾತನಾಡಿದ ಅವರು, ಬಿಜೆಪಿ ಸರ್ಕಾರದ ಅವಧಿಯಲ್ಲಿ ರಚನೆ ಮಾಡಲಾಗಿದ್ದ 243 ವಾರ್ಡಗಳನ್ನೂ ರದ್ದು ಮಾಡಿ, 225 ವಾರ್ಡಗಳನ್ನಾಗಿ ಮರುವಿಂಗಡನೆ ಮಾಡಿ ಬಿಬಿಎಂಪಿ ವಾರ್ಡ್ ವಿಂಗಡಣಾ ಸಮಿತಿಯು ವರದಿಯನ್ನು ಸಿದ್ದಪಡಿ ಸಿಎಂ ಸಿದ್ದರಾಮಯ್ಯ ಅವರಿಗೆ ಈಗಾಗಲೇ ಸಲ್ಲಿಸಲಾಗಿದೆ.
ಇದೇ ಶನಿವಾರ ಸಾರ್ವಜನಿಕವಾಗಿ ಹೊಸದಾಗಿ ಸಿದ್ದಪಡಿಸಲಾಗಿರುವ ವಾರ್ಡ್ಗಳ ಪಟ್ಟಿಯನ್ನು ಪ್ರಕಟ ಸರ್ಕಾರ ಪ್ರಕಟಿಸಲಿದೆ. ಪಟ್ಟಿ ಬಿಡುಗಡೆ ಮಾಡಿದ ಮೇಲೆ 15 ದಿನಗಳ ಸಾರ್ವಜನಿಕ ಆಕ್ಷೇಪಣೆಗೆ ಕಾಲವಕಾಶವಿದ್ದು ವಿಂಗಡಣೆ ಬಗ್ಗೆ ಸಾರ್ವಜನಿಕರು ಆಕ್ಷೇಪಣೆ ಇದಲ್ಲಿ ಅರ್ಜಿ ಸಲ್ಲಿಸಬಹುದು ಎಂದು ಅವರು ಹೇಳಿದ್ದಾರೆ.