Thursday, January 23, 2025

1 ಗಂಟೆ ಪೋಲಿಸ್ ಅಧಿಕಾರಿಯಾದ 8 ವರ್ಷದ ಬಾಲಕ

ಶಿವಮೊಗ್ಗ: ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ, ಬಾಲಕನ ಕನಸನ್ನು ನನಸು ಮಾಡಿದ ಎಸ್ ಪಿ. ಮಿಥುನ್ ಕುಮಾರ್ ನಗರದ ದೊಡ್ಡಪೇಟೆ ಪೋಲಿಸ್ ಠಾಣೆಯಲ್ಲಿ ನಡೆದಿದೆ

ನಗರದ ಸೊಳೆಬೈಲು ನಿವಾಸಿಯಾದ ಅಜಾನ್ ಖಾನ್ (8) ಎಂಬ ಬಾಲಕನೊಬ್ಬನಿಗೆ ಚಿಕ್ಕ ವಯಸ್ಸಿನಿಂದಲೂ ಪೋಲಿಸ್ ಆಗಬೇಕು ಎಂಬ ಹೆಬ್ಬಯಕೆ ಇತ್ತಂತೆ. ಆದರೆ ದುರಾದೃಷ್ಟವಶಾತ್ ಸ್ವಲ್ಪ ದಿನಗಳಿಂದ ಹೃದಯ ಸಂಬಂಧಿ ಕಾಯಿಲೆ ಇಂದ ಬಳಲುತ್ತಿರುವ ಬಾಲಕ ಅಜಾನ್ ಖಾನ್.

ಇದನ್ನು ಓದಿ : ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ; ತಂದೆ-ಮಗನ ಬಂಧನ

ಈ ಹಿನ್ನೆಲೆ ಬಾಲಕನ ತಂದೆ ತಬ್ರೇಜ್ ಖಾನ್ ಅವರು ತನ್ನ ಮಗ ಬದುಕಿರುವಾಗಲೇ ಅವನ ಆಸೆಗಳನ್ನು ಈಡೇರಿಸಬೇಕು ಎಂಬ ಆಸೆಯಿಂದ, ಈ ವಿಷಯದ ಕುರಿತು ಶಿವಮೊಗ್ಗದ SP ಮಿಥುನ್ ಕುಮಾರ್ ಅವರಿಗೆ ಬಾಲಕನ ತಂದೆ ತಿಳಿಸಿದರು. ವಿಷಯ ತಿಳಿದ ಕೂಡಲೇ ಮಾನವೀಯತೆ ದೃಷ್ಟಿಯಿಂದ SP ಮಿಥುನ್ ಕಮಾರ್ ಪೋರನ ಆಸೆಯನ್ನು ನನಸು ಮಾಡಿದ್ದಾರೆ.

1 ಗಂಟೆ ಪೊಲೀಸ್ ಅಧಿಕಾರಿಯಾದ 8 ವರ್ಷದ ಪೋರ

ಬಳಿಕ SP ಬಾಲಕನನ್ನು ಸಿಪಿಐ ಅಧಿಕಾರಿ ಸಮವಸ್ತ್ರವನ್ನು ಧರಿಸಿ, ಬಾಲಕನನ್ನು ಪೊಲೀಸ್ ಜೀಪ್​ನಲ್ಲಿ ನಗರದ ದೊಡ್ಡಪೇಟೆ ಠಾಣೆಗೆ ಕರೆದುಕೊಂಡು ಬಂದರು. ಅಷ್ಟೇ ಅಲ್ಲದೆ ಪುಟಾಣಿ ಇನ್ಸ್‌ಪೆಕ್ಟರ್‌ಗೆ ಸ್ವಾಗತಿಸಿ ಇನ್ಸ್​ಪೆಕ್ಟರ್​ ಖುರ್ಚಿಯಲ್ಲಿ ಕೂರಿಸಿದ ಎಸ್‌ಪಿ ಮಿಥುನ್ ಕುಮಾರ್. ಸಾಂಕೇತಿಕವಾಗಿ ಇನ್ಸ್‌ಪೆಕ್ಟರ್ ಹುದ್ದೆ ಅಲಂಕರಿಸಿದ ಬಾಲಕ, ಬೆಲ್ ಮಾಡಿ ಠಾಣೆಯ ಸಿಬ್ಬಂದಿಗಳನ್ನು ಕರೆದನು. ಸಿಬ್ಬಂದಿಗಳ ಕುಂದು ಕೊರತೆಗಳನ್ನು ಆಲಿಸಿದ ಬಾಲ ಇನ್ಸ್​ಪೆಕ್ಟರ್.

ಬಳಿಕ ವಿಸಿಟರ್ ಪುಸ್ತಕದಲ್ಲಿ ಇನ್ಸ್‌ಪೆಕ್ಟರ್ ಆಗಿ ಸಹಿ ಹಾಕಿ ಠಾಣೆಯ ಸಮಸ್ತ ಸಿಬ್ಬಂದಿಗೆ ಕೈ ಕುಲುಕಿ ಶುಭ ಕೋರಿದ ಪುಟಾಣಿ. ಕೆಲ ಗಂಟೆ ಬಳಿಕ ಇನ್ಸ್​ಪೆಕ್ಟರ್​ಗೆ ಕುರ್ಚಿ ಬಿಟ್ಟುಕೊಟ್ಟ ಬಾಲಕ ಅಜಾನ್ ಖಾನ್. ತನ್ನ ಮಗನ ಸಂತಸವನ್ನು ಕಂಡು ತಬ್ರೇಜ್ ಖಾನ್ ಬಾಲಕನನ್ನು ತಬ್ಬಿ ಮುತ್ತು ನೀಡಿದರು. ಅಷ್ಟೇ ಅಲ್ಲದೆ ಪುಟಾಣಿ ಬಾಲಕನ ಕನಸು ನನಸು ಮಾಡಿದ ಪೋಲಿಸ್ ಇಲಾಖೆಗೆ ಧನ್ಯವಾದ ಹೇಳಿದ ತಬ್ರೇಜ್ ಖಾನ್ ಹಾಗೂ ಬಾಲಕ ಅಜಾನ್ ಖಾನ್ .

RELATED ARTICLES

Related Articles

TRENDING ARTICLES