Wednesday, January 22, 2025

ಎಸ್​.ಟಿ ಸೋಮಶೇಖರ್​ ಸೋಲಿಸಲು ಮೂಲ ಬಿಜೆಪಿಗರ ತಂತ್ರಗಾರಿಕೆ: ಸ್ಪೋಟಕ ಆಡಿಯೋ ಲಭ್ಯ!

ಬೆಂಗಳೂರು : ಮಾಜಿ ಸಚಿವ ಎಸ್​.ಟಿ ಸೋಮಶೇಖರ್ ಕಾಂಗ್ರೆಸ್​ನತ್ತ ಮುಖಮಾಡುತ್ತಿದ್ದಾರೆ ಎನ್ನುವ ಅನುಮಾನಕ್ಕೆ ಮೂಲ ಬಿಜೆಪಿಗರ ನಡೆ ಕಾರಣ ಎನ್ನುವ ಸ್ಪೋಟಕ ಮಾಹಿತಿ ಪವರ್ ಟಿವಿ ಗೆ ಲಭ್ಯವಾಗಿದೆ.​

ಮೂಲ ಬಿಜೆಪಿ-ವಲಸಿಗ ಭೇದಭಾವಕ್ಕೆ ಬೇಸತ್ತ ಯಶವಂತಪುರ ಶಾಸಕ ಎಸ್​.ಟಿ.ಸೋಮಶೇಖರ್​. ಕಳೆದ ವಿದಾನಸಭಾ ಚುನಾವಣೆಯಲ್ಲಿ ಸೋಮಶೇಖರ್​ ಸೋಲಿಗೆ ಸುಮಾರು 100 ಜನ ಸ್ಥಳೀಯ ಬಿಜೆಪಿ ಮುಖಂಡರಿಂದ ಬಿಜೆಪಿ ವಿರುದ್ಧವೇ ಕೆಲಸ ಮಾಡಿಸುವ ತಂತ್ರಗಾರಿಕೆ ಕುರಿತು ದೂರವಾಣಿ ಸಂಭಾಷಣೆ ಪವರ್ ಟಿವಿಗೆ ಸ್ಫೋಟಕ ಆಡಿಯೋ ಲಭ್ಯವಾಗಿದೆ.

ಇದನ್ನು ಓದಿ: ನಾನು ಸಚಿವ ಸ್ಥಾನ ಬಿಟ್ಟುಕೊಡಲು ಸಿದ್ದ : ಸಚಿವ ಕೆ.ಹೆಚ್​ ಮುನಿಯಪ್ಪ

ಈ ಆಡಿಯೋ ದಲ್ಲಿ ಯಶವಂತಪುರ ಕ್ಷೇತ್ರದ ಚಿಕ್ಕಬಿದರಕಲ್ಲು, ಕೆಂಗೇರಿ, ಹೆಮ್ಮಿಗೆಪುರ, ಉಲ್ಲಾಳದಲ್ಲಿ ಜೆಡಿಎಸ್​ಗೆ ಲೀಡ್ ಕೊಡಲು ಜೆಡಿಎಸ್ ಅಭ್ಯರ್ಥಿ ಗೆಲ್ಲುವಂತೆ ನೋಡಿಕೊಳ್ಳಬೇಕು, ಯಾರಿಗೂ ಗೊತ್ತಾಗದಂತೆ ಸೋಮಶೇಖರ್ ಸೋಲಿಸಬೇಕೆಂದು ರಣತಂತ್ರ ರಚನೆ ಬಗ್ಗೆ ಮೂಲ ಬಿಜೆಪಿಗರಾದ ವಿಜಯ್​ ಕುಮಾರ್​ ಹಾಗು ಧನಂಜಯ್​ ನಡುವೆ ನಡುವೆ ಮಾತುಕತೆ ನಡೆದಿದೆ.

ತಮ್ಮ ಸೋಲಿಗೆ ಮುಹೂರ್ತ ಇಟ್ಟಿದ್ದರಿಂದ ತೀವ್ರ ಅಸಮಾಧಾನಗೊಂಡ ಸೋಮಶೇಖರ್, ಈ ಆಡಿಯೋ ವಿಚಾರ ಬಿಜೆಪಿ ವರಿಷ್ಠರ ಗಮನಕ್ಕೆ ತಂದರೂ ಯಾವುದೇ ಕ್ರಮ ಕೈಗೊಳ್ಳದ ನಾಯಕರು ತನ್ನ ವಿರುದ್ಧವೇ ಕೆಲಸ ಮಾಡಿದ್ರೂ ಏನೂ ಕ್ರಮ ಕೈಗೊಂಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ . ಇದೇ ಕಾರಣದಿಂದ ಕಾಂಗ್ರೆಸ್ ಸೇರ್ಪಡೆಗೆ ಮನಸು ಮಾಡಿದ್ರಾ ಸೋಮಶೇಖರ್ ​​ ಎನ್ನುವ ಅನುಮಾನಗಳು ವ್ಯಕ್ತವಾಗುತ್ತಿದೆ.

RELATED ARTICLES

Related Articles

TRENDING ARTICLES