Monday, February 24, 2025

ಆಗಸ್ಟ್ ಅಂತ್ಯಕ್ಕೆ ಈರುಳ್ಳಿ ಬೆಲೆ ಏರಿಕೆ?

ಬೆಂಗಳೂರು : ಟಮೊಟೋ ಬೆಲೆ ಇಳಿಕೆ ಕಂಡ ಬೆನ್ನಲ್ಲೇ ಗೃಹಿಣಿಯರಿಗೆ ಮತ್ತೊಂದು ಬೆಲೆ ಏರಿಕೆ ಬಿಸಿ ಮಹಿಳೆಯರ ಕಣ್ಣಲ್ಲಿ ನೀರು ತರಿಸುತ್ತಿರುವ ಈರುಳ್ಳಿ ಬೆಲೆ.

ಮಹಾರಾಷ್ಟ್ರ ಹಾಗೂ ಪುಣೆಯಲ್ಲಿ ಭಾರೀ ಮಳೆಯಾಗಿದ್ದು, ಈರುಳ್ಳಿ ಬೆಳೆಗಳು ಹಾಳಾಗಿರುವ ಹಿನ್ನೆಲೆ ನಿಧಾನವಾಗಿ ಏರಿಕೆಯಾಗುತ್ತಿರುವ ಈರುಳ್ಳಿ. ಕಳೆದ ದಿನಗಳ ಹಿಂದೆ ಕೆಜಿಗೆ 25 ರಿಂದ 28 ರೂಪಾಯಿ ಅಸುಪಾಸಿನಲ್ಲಿ ಮಾರಾಟವಾಗುತ್ತಿದ್ದ ಈರುಳ್ಳಿ ಬೆಲೆ ನಿಧಾನಕ್ಕೆ 30 ರಿಂದ 35 ರೂಪಾಯಿವರೆಗೆ ತಲುಪಿದೆ.

ಇದನ್ನು ಓದಿ : 1 ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ಗುಡ್​ ನ್ಯೂಸ್; ಮಧು ಬಂಗಾರಪ್ಪ

ದೇಶಾದ್ಯಂತ ಟಮೋಟೊ ಬೆಲೆ ದಾಖಲೆ ಮಟ್ಟಕ್ಕೆ ತಲುಪಿದ್ದು, ಮುಂದಿನ ದಿನಗಳಲ್ಲಿ ಈರುಳ್ಳಿ ಬೆಲೆಯು ನಿಧಾನವಾಗಿ ಏರಿಕೆಯಾಗುವ ಅಘಾತಕಾರಿ ಸುದ್ಧಿ ಹೊರಬಿದ್ದಿದೆ. ಟಮೋಟೊ ಬೆಲೆ ಏರಿಕೆಯಾದಂತೆ ಈರುಳ್ಳಿ ಬೆಲೆ ಕೂಡ ಗಗನಕ್ಕೆ ಮುಟ್ಟುವ ಸಾಧ್ಯತೆ ಹೆಚ್ಚಾಗುವಂತಿದೆ.

RELATED ARTICLES

Related Articles

TRENDING ARTICLES