ಯಾದಗಿರಿ : ಕುಡಿಯುವ ನೀರಿಗಾಗಿ ಜನರು ಬಿಂದಿಗೆ ಹಿಡಿದು ಹುಡುಕಾಡಬೇಕಾದ ಪರಿಸ್ಥತಿ ಎದುರಾಗಿದೆ ಘಟನೆ ಜಿಲ್ಲೆಯ ವಡಿಗೇರಾ ಪಟ್ಟಣದಲ್ಲಿ ನಡೆದಿದೆ.
ಜಿಲ್ಲೆಯ ನಗರಸಭೆಯಿಂದ ಪ್ರತಿಯೊಂದು ವಾರ್ಡ್ಗಳಲ್ಲಿ ದಿನದ 24 ಗಂಟೆ ನೀರು ಕೊಡುವ ಯೋಜನೆ ಹೆಸರಿಗೆ ಮಾತ್ರ ಜಾರಿಯಲ್ಲಿದೆ. ಏಕೆಂದರೆ ಈ ಬಡಾವಣೆಗಳಲ್ಲಿ ಜನರು ಈ 24 ಗಂಟೆ ನೀರಿನ ಯೋಜನೆಯಿಂದ ಇನ್ನೂವರೆಗೂ ಹನಿ ನೀರು ಸಹ ಕಾಣದೆ ಜನ ಕಂಗಾಲಗಿದ್ದಾರೆ.
ಇದನ್ನು ಓದಿ : ತ್ರಿವರ್ಣ ಧ್ವಜ ಹಾರಿಸಿ, ‘ಪಾಕಿಸ್ತಾನ ಮುರ್ದಾಬಾದ್’ ಎಂದ ಸೀಮಾ ಹೈದರ್
ಕೆಲವು ಬಡವಣೆಗಳಲ್ಲಂತೂ ನೀರು ಸರಬರಾಜು ನಿಂತೆ ಹೋಗಿದೆ. ಊರಿನಿಂದ ಒಂದು ಕಿಲೋ ಮೀಟರ್ ದೂರ ಇರುವ ಕೊಳವೆ ಬಾವಿಗೆ ಹೋಗಿ, ಸೈಕಲ್ನಲ್ಲಿ ಅಥವಾ ನಡೆದುಕೊಂಡು ನೀರು ತರುವಂತಹ ಪ್ರಸಂಗಕ್ಕೆ ಮಹಿಳೆಯರು ಹೈರಾಣಗಿದ್ದಾರೆ. ಬೇಸತ್ತಾ ಬಡಾವಣೆ ಮಹಿಳೆಯರು ಅಧಿಕಾರಿಗಳಿಗೆ ಇಡೀ ಶಾಪವನ್ನು ಹಾಕುತ್ತಿದ್ದಾರೆ.
ಇನ್ನೂ ಪಟ್ಟಣದಲ್ಲಿ ಕುಡಿಯುವ ನೀರಿನ ಅಭಾವ ಹೆಚ್ಚಾಗಿದ್ದರು, ಕೂಡ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಮಾತ್ರ ತೀವ್ರ ನಿರ್ಲಕ್ಷ್ಯ.ಈ ಹಿನ್ನೆಲೆ ಕರ್ನಾಟಕ ರಕ್ಷಣಾ ವೇದಿಕೆಯ ಪ್ರವೀಣ್ ಶೆಟ್ಟಿ ಅವರು ಆರೋಪವನ್ನು ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲದೆ ಕುಡಿಯುವ ನೀರಿಗೆ ಯೋಗ್ಯವಲ್ಲದ ಉಪ್ಪು ನೀರನ್ನು ಸೇವಿಸುತ್ತಿರುವ ಜನರು. ಈ ಪರಿಸ್ಥಿತಿಯಿಂದ ಮಹಿಳೆಯರು ಮತ್ತು ಮಕ್ಕಳು ಹೈರಾಣಗಿದ್ದು, ಗ್ರಾಮಸ್ಥರು ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.