Monday, November 25, 2024

ಪಾನಿಯ ಘಟಕ ಸ್ಥಾಪನೆಗೆ ಮಾಜಿ ಕ್ರಿಕೆಟಿಗ ಮುರಳಿಧರನ್​ 400 ಕೋಟಿ ಹೂಡಿಕೆ!

ಚಾಮರಾಜನಗರ ಜಿಲ್ಲೆ : ಶ್ರೀಲಂಕಾದ ಮಾಜಿ ಕ್ರಿಕೆಟಿಗ ಮುತ್ತಯ್ಯ ಮುರಳೀದರನ್‌ ಯಾರಿಗೆ ತಾನೇ ಗೊತ್ತಿಲ್ಲ ಅದು ಕೂಡ ಕ್ರಿಕೆಟ್ ಇಷ್ಟಪಡೋರಿಗಂತೂ ಕೇಳೋದೆ ಬೇಡ, ಅವರ ಹೆಸರು ಕೇಳಿದ್ರೆ ಮೊದಲ ತಲೆಗೆ ಬರೋದು ಅವರ ವಿಶಿಷ್ಟ ಶೈಲಿಯ ಸ್ಪೀನ್ ಬೌಲಿಂಗ್!

ಹೌದು, ಒಂದು ಕಾಲದಲ್ಲಿ ಅವರು ಬೌಲಿಂಗ್ ಮಾಡಿದ್ರೆ ಬಹುತೇಕ ಬ್ಯಾಟ್ಸ್ಮೆನ್ಗಳು ಗಟ್ಟಿ ಹೊಡೆತಕ್ಕೆ ಯೋಚಿಸುತ್ತಿದ್ರು ಹಾಗೇ, ಅವರು ಸಹ ಕ್ರಿಕೆಟ್ನಲ್ಲಿ ಅತ್ಯುತ್ತಮ ಸಾಧನೆ ಮಾಡಿ ವೃತ್ತಿ ಬದುಕಿಗೆ ಗುಡ್ಬೈ ಹೇಳಿದ್ಮೇಲೆ ಅವರು ವ್ಯವಹಾರ ಕ್ಷೇತ್ರಕ್ಕೆ ಎಂಟ್ರಿ ಕೊಟ್ರು. ಅದರ ಮುಂದುವರೆದ ಭಾಗವಾಗಿ, ಮುತ್ತಯ್ಯ ಮುರಳೀದರನ್‌ ಅವರು ಕರ್ನಾಟಕದ ಗಡಿನಾಡಿ ಜಿಲ್ಲೆ ಚಾಮರಾಜನಗರದಲ್ಲಿ ಬೃಹತ್‌ಉದ್ಯಮವೊಂದನ್ನು ಸ್ಥಾಪಿಸಲು ತೀರ್ಮಾನಿಸಿದ್ದು ₹400 ಕೋಟಿ ಬಂಡವಾಳ ಹೂಡುತ್ತಿದ್ದಾರೆ.

ತಾಲ್ಲೂಕಿನ ಕೆಲ್ಲಂಬಳ್ಳಿ, ಬದನಗುಪ್ಪೆ ಕೈಗಾರಿಕಾ ಪ್ರದೇಶದ 46 ಎಕರೆ ಪ್ರದೇಶದಲ್ಲಿ ಪಾನೀಯ ತಯಾರಿಕಾ ಘಟಕವನ್ನು ಆರಂಭಿಸುತ್ತಿದ್ದಾರೆ. ಇದರಿಂದಾಗಿ 800 ಮಂದಿಗೆ ಉದ್ಯೋಗ ಸಿಗಲಿದೆ.

ಆರು ತಿಂಗಳ ಹಿಂದೆಯೇ ಅವರು ಜಮೀನು ಖರೀದಿಸಿದ್ದು, ರಾಜ್ಯಮಟ್ಟದಲ್ಲೇ ಯೋಜನೆಗೆ ಅನುಮತಿ ಸಿಕ್ಕಿದೆ. ಘಟಕ ನಿರ್ಮಾಣ ಕಾರ್ಯ ಭರದಿಂದ ಸಾಗಿದ್ದು, ವರ್ಷದೊಳಗೆ ಕಾರ್ಖಾನೆ ಆರಂಭವಾಗುವ ಸಾಧ್ಯತೆ ಇದೆ.

ಎಂ.ಎಸ್‌ ಮುತ್ತಯ್ಯ ಬೆವರೇಜ್‌ ಅಂಡ್‌ ಕನ್‌ಫೆಕ್ಷನರಿ ಪ್ರೈ ಲಿಮಿಟೆಡ್‌ ಎಂಬ ಹೆಸರಿನಲ್ಲಿ ಕಾರ್ಖಾನೆ ಸ್ಥಾಪಿಸುತ್ತಿದ್ದು, ಇದು ತಂಪು ಪಾನೀಯ ಘಟಕ ಎಂದು ಕೈಗಾರಿಕಾ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

‘ದೊಡ್ಡ ಪ್ರಮಾಣದ ಉದ್ದಿಮೆಯಾಗಿರುವುದರಿಂದ ರಾಜ್ಯ ಮಟ್ಟದಲ್ಲಿಯೇ ಭೂಮಿ ಹಂಚಿಕೆ ಸೇರಿದಂತೆ ಎಲ್ಲ ನಿರ್ಧಾರಗಳನ್ನು ಕೈಗೊಳ್ಳಲಾಗಿದೆ. ಮುತ್ತಯ್ಯ ಮುರಳೀಧರನ್‌ ಅವರು ಜಿಲ್ಲೆಗೆ ಭೇಟಿ ಕೊಟ್ಟಿಲ್ಲ. ಆದರೆ, ಬೆಂಗಳೂರಿನ ಸಭೆಗಳಲ್ಲಿ ಭಾಗವಹಿಸಿದ್ದಾರೆ. ಅವರ ತಂಡದ ಸದಸ್ಯರು ಮೇಲ್ಚಿಚಾರಣೆ ನೋಡಿಕೊಳ್ಳುತ್ತಿದ್ದಾರೆ’ ಎಂದು ಕೈಗಾರಿಕೆ ಇಲಾಖೆ ಉಪನಿರ್ದೇಶಕ ರಾಜೇಂದ್ರ ಪ್ರಸಾದ್‌ಮಾಹಿತಿ ನೀಡಿದರು.

‘ಕೈಗಾರಿಕೆಗಳು ಹೆಚ್ಚು ಬಂದಷ್ಟೂ ಜಿಲ್ಲೆಯ ಯುವಕರಿಗೆ ಉದ್ಯೋಗ ಸಿಗುತ್ತದೆ. ಈ ಘಟಕದಿಂದ ಕನಿಷ್ಠ 800 ಮಂದಿಗೆ ಕೆಲಸ ಸಿಗಲಿದೆ. ಕಾಮಗಾರಿ ವೇಗವಾಗಿ ಸಾಗುತ್ತಿದ್ದು, ಇನ್ನೂ ಒಂಬತ್ತು ಹತ್ತು ತಿಂಗಳಲ್ಲಿ ಕಾರ್ಖಾನೆ ಆರಂಭವಾಗುವ ನಿರೀಕ್ಷೆ ಇದೆ’ ಎಂದು ಅವರು ಹೇಳಿದರು.

RELATED ARTICLES

Related Articles

TRENDING ARTICLES