Friday, November 22, 2024

ಆರ್.ಆರ್ ನಗರದವ್ರಿಗೆ ಬಾಗಿಲು ಓಪನ್ ಇರುತ್ತೆ : ಮುನಿರತ್ನ

ಬೆಂಗಳೂರು : ಆರ್.ಆರ್ ನಗರದಲ್ಲಿ ಸೋತ ಅಭ್ಯರ್ಥಿಯೇ ಎಂಎಲ್‌ಎ ಅಂತಾರೆ ಡಿಕೆಶಿ. ಆರ್.ಆರ್ ನಗರದವ್ರು ಯಾರೇ ಹೋದ್ರೂ ಭೇಟಿ ಮಾಡ್ತಾರೆ. ಉಳಿದೆಲ್ಲ ಕ್ಷೇತ್ರಗಳ ಜನರ ಭೇಟಿ ಬಂದ್, ಆದರೆ ಆರ್.ಆರ್ ನಗರದವರಿಗೆ ಬಾಗಿಲು ಓಪನ್ ಇರುತ್ತೆ ಎಂದು ಬಿಜೆಪಿ ಶಾಸಕ ಮುನಿರತ್ನ ಕುಟುಕಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿರುವ ಅವರು, ನಮಗೆ ಬಿಜೆಪಿಯೇ ಭವಿಷ್ಯ, ಬಿಜೆಪಿಯ ಚಿನ್ಹೆಯೇ ಆಧಾರ. ನಾನು ಕಾಂಗ್ರೆಸ್​ ಪಕ್ಷಕ್ಕೆ ಹೋಗಲ್ಲ, ಇದು ನನ್ನ ಗಟ್ಟಿ ನಿರ್ಧಾರ ಎಂದು ಗೊಂದಲಗಳಿಗೆ ತೆರೆ ಎಳೆದಿದ್ದಾರೆ.

ಡಿಕೆಶಿ, ಡಿಕೆಸು ಬಗ್ಗೆ ನನಗೆ ದ್ವೇಷ ಇಲ್ಲ. ರಾಜಕೀಯವಾಗಿ ಅವರು ನನ್ನ ಕ್ಷೇತ್ರದಲ್ಲಿ ಸೋಲಿಸಲು ಪ್ರಯತ್ನಿಸಿದವರು. ಬಿಜೆಪಿಯಲ್ಲಿ ನಮಗೆ ಗೌರವದಿಂದ ನೋಡಲಾಗ್ತಿದೆ. ಒಬ್ಬರಿಗೂ ಏಕವಚನ ಬಳಸಿ ಯಾರೂ ಮಾತಾಡಿಲ್ಲ. ಒಬ್ಬ ಸಣ್ಣ ವ್ಯಕ್ತಿಯೂ ಬನ್ನಿ ಹೋಗಿ, ತಾವು ಅಂತ ಗೌರವದಿಂದ ಮಾತಾಡಿಸ್ತಾರೆ ಎಂದು ಹೇಳಿದ್ದಾರೆ.

ಅವರೇ ಸ್ಪಷ್ಟೀಕರಣ ನೀಡಿದ್ದಾರೆ

ನಮಗೆ ಬಿಜೆಪಿಯಲ್ಲಿ ಎಲ್ಲಾ ರೀತಿಯ ಗೌರವ ಸಿಕ್ತಿದೆ. ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ಅವರ ಹೇಳಿಕೆ ಬಗ್ಗೆ ಅವರೇ ಸ್ಪಷ್ಟೀಕರಣ ನೀಡಿದ್ದಾರೆ. ಅದರ ಬಗ್ಗೆ ಈಗ ಮಾತಾಡುವ ಅಗತ್ಯ ಇಲ್ಲ. ಅದು ಮುಗಿದ ಕತೆ ಎಂದು ಮುನಿರತ್ನ ತಿಳಿಸಿದ್ದಾರೆ.

ಮುಂದೆ ಅವರಿಗೇ ಮುಳ್ಳಾಗುತ್ತೆ

ಬಿಬಿಎಂಪಿ ಕಾಮಗಾರಿಗಳ ತನಿಖೆ ನ್ಯಾಯಯುತ ಆಗಲಿ. ಎಲ್ಲರಿಗೂ ಒಂದೇ ನ್ಯಾಯ ಇರಬೇಕು. ಅಧಿಕಾರಿಗಳು ತಿರುಚಿ ವರದಿ ಬರೆಯಬಾರದು. ಆರ್.ಆರ್ ನಗರದಲ್ಲಿ ಅವ್ಯವಹಾರ ಆಗಿದೆ ಅಂತ ಅಧಿಕಾರಿಗಳು ತಿರುಚಿ ಬರೆದರೆ, ಆ ದಾಖಲೆ ಮುಂದೆ ಅವರಿಗೇ ಮುಳ್ಳಾಗುತ್ತೆ. ಆ ದಾಖಲೆ ಮುಂದೆ ಇನ್ನೂ ದೊಡ್ಡ ಸಂಸ್ಥೆಗೆ ತನಿಖೆಗೆ ಹೋಗುತ್ತೆ. ಅಧಿಕಾರಿಗಳು ಸಮಗ್ರವಾಗಿ ಪರಿಶೀಲನೆ ಮಾಡಿ ತನಿಖೆ ಮಾಡಲಿ ಎಂದು ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ.

RELATED ARTICLES

Related Articles

TRENDING ARTICLES