Monday, December 23, 2024

ಕೂಲಿ ಕಾರ್ಮಿಕನ ಕುಟುಂಬದ ಮೇಲೆ ಮೇಸ್ತ್ರಿ ಹಲ್ಲೆ

ಆನೇಕಲ್ : ಕಟ್ಟಡ ಕೂಲಿ ಕಾರ್ಮಿಕ ಕುಟುಂಬದ ಮೇಲೆ ಹಲ್ಲೆ ನಡೆಸಿರುವ ಮೇಸ್ತ್ರಿ ಘಟನೆ ಆನೇಕಲ್ ತಾಲೂಕಿನ ಚಂದಾಪುರದ ಹೆಡ್ ಮಾಸ್ಟರ್ ಲೇಔಟ್​ನಲ್ಲಿ ನಡೆದಿದೆ.

ರಾಯಚೂರು ಮೂಲದ ಶಿವರಾಜ್ (58) ಹಲ್ಲೆಗೊಳಾಗದ ವ್ಯಕ್ತಿ. ಎಂಬುವವನ ಕುಟುಂಬ. ಬಾಲು ಎಂಬ ಮೇಸ್ತ್ರಿ ಕೈ ಕೆಳಗೆ ಕೆಲಸ ಮಾಡುತ್ತಿದ್ದರು. ಬಳಿಕ ಸ್ವಲ್ಪ ದಿನಗಳಿಂದ ಬಾಲುವನ್ನು ಬಿಟ್ಟು ಪ್ರತ್ಯೇಕವಾಗಿ ಕಟ್ಟಡ ನಿರ್ಮಾಣ ಕೆಲಸ ಮಾಡಲು ಮುಂದಾದ ಶಿವರಾಜ್ ಕುಟುಂಬ. ಈ ಹಿನ್ನೆಲೆ ಕೋಪಗೊಂಡ ಮೇಸ್ತ್ರಿ ಅವನ ಕುಟುಂಬದ ಮೇಲೆ ಹಲ್ಲೆ ನಡೆಸಿದ್ದಾನೆ.

ಇದನ್ನು ಓದಿ : ಆಗಸ್ಟ್ ಅಂತ್ಯಕ್ಕೆ ಈರುಳ್ಳಿ ಬೆಲೆ ಏರಿಕೆ?

ನಿನ್ನೆ ರಾತ್ರಿ ಮನೆಯಲ್ಲಿ ಎಲ್ಲರೂ ಕೂತು ಊಟ ಮಾಡುತ್ತಿದ್ದ ವೇಳೆ ಮನೆಗೆ ನುಗ್ಗಿದ್ದ, ಮೇಸ್ತ್ರಿ ಬಾಲು ಅಂಡ್ ಟೀಮ್. ಮನೆಯಲ್ಲಿದ್ದ ಐವರ ಮೇಲೆ ಹಲ್ಲೆ ನಡೆಸಿದ್ದಾರೆ. ಮನೆಯ ಮುಖ್ಯಸ್ಥ ಶಿವರಾಜ್​ಗೆ ಕೈ ಮತ್ತು ಕಾಲನ್ನು ಮುರಿದಿರುವ ಆರೋಪಿಗಳು. ಮತ್ತು ಮನೆಯಲ್ಲಿದ್ದ ಶಿವರಾಜ್​ನ ಮಕ್ಕಳಿಗೆ ರಾಡ್​ನಿಂದ ತಲೆ ಮತ್ತು ಕಣ್ಣಿನ ಭಾಗಕ್ಕೆ ಹಲ್ಲೆ ಮಾಡಿದ್ದಾರೆ.

ಗಾಯಾಳುಗಳನ್ನು ಜಿಲ್ಲೆಯ ಸಾರ್ವಜನಿಕ ಆಸ್ಪತ್ರೆಗೆ ರವಾನಿಸಲಾಗಿದೆ. ಈ ಘಟನಾ ಹಿನ್ನೆಲೆ ಸೂರ್ಯ ಸಿಟಿ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

RELATED ARTICLES

Related Articles

TRENDING ARTICLES