Sunday, January 19, 2025

ಅವ್ರಿಗೆ ಅಜ್ಜಯ್ಯನ ರಕ್ಷಣೆ ಇದೆ, ನಮಗೆ ಇಲ್ವಲ್ಲಾ? : ಕುಮಾರಸ್ವಾಮಿ

ಬೆಂಗಳೂರು : ಅವರಿಗೆ ಅಜ್ಜಯ್ಯನ ರಕ್ಷಣೆ ಇದೆ, ನಮಗೆ ಇಲ್ಲ ಅಲ್ವಾ? ಮಾತೆತ್ತಿದ್ರೆ ನಮ್ಮ ಅಜ್ಜಯ್ಯನ ಸುದ್ದಿಗೆ ಬರಬೇಡಿ ಅಂತ. ಎಲ್ಲದಕ್ಕೂ ಅಂತ್ಯ ಇದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಕುಟುಕಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಮುಂದಿನ 15 ವರ್ಷ ಕಾಂಗ್ರೆಸ್ ಆಡಳಿತ ಅಂತಾರೆ. ಹಿಂದೆ ಯಡಿಯೂರಪ್ಪ ಅವ್ರು, ಮುಂದೆ 10 ವರ್ಷ ನಾನೇ ಸಿಎಂ ಅಂದ್ರು. ಅದು ಕಲಾಪದಲ್ಲಿ ರೆಕಾರ್ಡ್ ಆಗಿದೆ. ಏನಾಯ್ತು ಆ ನಂತರ ಎಂದು ಗುಡುಗಿದ್ದಾರೆ.

ಅಧಿಕಾರ ಜನ ಕೊಡ್ತಾರೆ, ಯಾರ ಕೈಯಲ್ಲೂ ಇಲ್ಲ. ನಿಮ್ಮನ್ನು ಜನ ಸದ್ಯಕ್ಕೆ ಅಧಿಕಾರಕ್ಕೆ ತಂದು ಕೊರಿಸಿದ್ದಾರೆ. ಹಿಂದೆ ಗರೀಬಿ ಹಠಾವೋ ಹೆಸರಲ್ಲಿ ಅಧಿಕಾರಕ್ಕೆ ಬಂದ್ರಿ. ಈಗ ಉಚಿತ ಕೊಡುಗೆ ಹೆಸರಲ್ಲಿ ಅಧಿಕಾರಕ್ಕೆ ಬಂದಿದ್ದೀರಿ. ಆಯ್ತು.. 10 ವರ್ಷದ ಬಳಿಕ ಅಧಿಕಾರ ಕೊಟ್ಟಿದ್ದಾರೆ, ಒಳ್ಳೆಯ ಕೆಲಸ ಮಾಡಿ. ಅದು ಬಿಟ್ಟು ಬಿಜೆಪಿ ಪರ ಅಂತೀರಾ? ಎಂದು ಛೇಡಿಸಿದ್ದಾರೆ.

ನಾನು ಬಿಜೆಪಿ ಅಡಿಯಾಳಾ?

ನಾನು ಬಿಜೆಪಿ ಅಡಿಯಾಳಾ? ಕುಮಾರಸ್ವಾಮಿ ಜಾತಿ ಬಗ್ಗೆ ಮಾತಾಡ್ತಾನೆ ಅನ್ನೋದು. ನಮ್ಮ ಅಧಿಕಾರ ನೋಡಿ ಹೊಟ್ಟೆ ಕ್ಯೂಚಿಕೊಳ್ತಿದ್ದಾನೆ ಅಂತಾರೆ. ನನಗೆ ಹೊಟ್ಟೆ ಉರೀನೋ, ತಲೆನೋವೋ, ಬುದ್ದಿ ಭ್ರಮಣೆಯೋ.. ಔಷಧಿ ತಗೋತೀನಿ ಎಂದು ಕಾಂಗ್ರೆಸ್ಸಿಗರಿಗೆ ಕುಮಾರಸ್ವಾಮಿ ಚಾಟಿ ಬೀಸಿದ್ದಾರೆ.

RELATED ARTICLES

Related Articles

TRENDING ARTICLES