Sunday, December 22, 2024

ಅಂಬೇಡ್ಕರ್​ ಫೋಟೊ ಇಡದೇ ಅಧಿಕಾರಿಗಳು ಯಟವಟ್ಟು: ದಲಿತ ಸಂಘಟನೆಗಳು ಆಕ್ರೋಶ

ಗದಗ : ನಗರದ ಕೆಎಸ್​ಆರ್​ಟಿಸಿ ಡಿಸಿ ಕಚೇರಿಯಲ್ಲಿ ಅಂಬೇಡ್ಕರ್​ ಇಡದೇ ಸ್ವಾತಂತ್ರ್ಯ ದಿನಾಚರಣೆ ಮಾಡಿದ ಅಧಿಕಾರಿಗಳ ವಿರುದ್ದ ದಲಿತಪರ ಸಂಘಟನೆಗಳು ಪ್ರತಿಭಟನೆ ನಡೆಸಿದ ಬೆನ್ನಲ್ಲೆ ಎಚ್ಚತ್ತ ಅಧಿಕಾರಿಗಳು ಕ್ಷಮೆ ಕೋರಿದ ಘಟನೆ ನಡೆದಿದೆ.

ಇಂದು ಬೆಳಗ್ಗೆ ಮುಳಗುಂದ ನಾಕಾ ಬಳಿ ಇರುವ ಸಾರಿಗೆ ವಿಭಾಗೀಯ ಕಚೇರಿಯಲ್ಲಿ  77 ನೇ ಸ್ವಾತಂತ್ರೋತ್ಸವ ಆಚರಣೆ ವೇಳೆ ಸಂವಿಧಾನ ಶಿಲ್ಪಿ ಡಾ.ಬಿ.ಆರ್​ ಅಂಬೇಡ್ಕರ್ ರವರ ಪೋಟೋ ಇಡದೇ ಮಹಾತ್ಮಾ ಗಾಂಧಿಜಿ ಪೋಟೋ ಮಾತ್ರ ಇಟ್ಟು ಸ್ವಾತಂತ್ರ್ಯ ದಿನಾಚರಣೆ ಮಾಡಲಾಗಿತ್ತು.

ಇದನ್ನೂ ಓದಿ: ನಾನು ಆರೂವರೆ ಕೋಟಿ ಕನ್ನಡಿಗರ ವಕ್ತಾರ: ಹೆಚ್​​ಡಿಕೆ

ವಿಚಾರ ತಿಳಿಯುತ್ತಿದ್ದಂತೆ ದಲಿತಪರ ಸಂಘಟನೆಗಳು ಕಚೇರಿ ಎದುರು ಪ್ರತಿಭಟನೆ ನಡೆಸಿದರು, ಪ್ರತಿಭಟನೆಯಿಂದ ಎಚ್ಚೆತ್ತ ಅಧಿಕಾರಿಗಳು ಅಚಾತುರ್ಯದಿಂದ ಆದ ಘಟನೆಯಾಗಿದ್ದು ಎಲ್ಲರಿಗೂ ಕ್ಷಮೇ ಕೋರುತ್ತೇನೆ ಎಂದರು. ನಂತರ ಕೆ.ಎಸ್.ಆರ್.ಟಿ.ಸಿ ಡಿಸಿ ಶೀನಯ್ಯ ಅವರ ಸುಮ್ಮುಖದಲ್ಲಿ ಅಂಬೇಡ್ಕರ್​ ಫೋಟೊ ಇಟ್ಟು ಸಂವಿಧಾನ ಪೀಠಿಕೆ ಓದುವ ಮೂಲಕ ಪ್ರಕರಣಕ್ಕೆ ತೆರೆ ಎಳೆದರು.

RELATED ARTICLES

Related Articles

TRENDING ARTICLES