Thursday, December 19, 2024

ಯಾರಿಗೆ ಯಾರನ್ನು ಕಂಡ್ರೆ ಭಯ ಅಂತ ಚುನಾವಣೆಯಲ್ಲಿ ಗೊತ್ತಾಗುತ್ತೆ: ಹೆಚ್​ಡಿಕೆಗೆ ತಿರುಗೇಟು

ಬೆಂಗಳೂರು : ಯಾರಿಗೆ ಯಾರನ್ನ ಕಂಡ್ರೆ ಭಯಾ ಅಂತ ಚುನಾವಣೆಯಲ್ಲಿ ಗೊತ್ತಾಗುತ್ತದೆ ಎಂದು ಕೃಷಿ ಸಚಿವ ಚಲುವರಾಯಸ್ವಾಮಿ ಮಾಜಿ ಮುಖ್ಯಮಂತ್ರಿ ಹೆಚ್​​ಡಿ ಕುಮಾರಸ್ವಾಮಿಗೆ ತಿರುಗೇಟು ನೀಡಿದರು.

ನಾನು ವಿಚಾರ ಚರ್ಚೆ ಮಾಡಿಲ್ಲಾ ಅಂದ್ರೂ ನನ್ನ ಹೆಸರು ಯಾಕೆ ತರ್ತಾರೆ ನನ್ನ ಬಗ್ಗೆ ಭಯನಾ ಅಂತಾ  ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಮಾತಿಗೆ ನಗರದಲ್ಲಿ ಮಾದ್ಯಮದವರೊಂದಿಗೆ ಪ್ರತಿಕ್ರಿಯಿಸಿದ ಅವರು,

ಇದನ್ನೂ ಓದಿ: ಚಲುವರಾಯಸ್ವಾಮಿಗೆ ನನ್ನದೇ ಭಯ! : ಹೆಚ್​.ಡಿ.ಕೆ

ರಾಜ್ಯಪಾಲರಿಗೆ ನೀಡಿರುವ ಫೇಕ್ ಲೆಟರ್ ಬಗ್ಗೆ ನನಗೆ ಸಂಪೂರ್ಣ ಮಾಹಿತಿ ಇದೆ, ಅದನ್ನ ತನಿಖೆ ಮಾಡಿ‌ ಅಂತಾ ಹೇಳಿದ್ದೇವೆ ಮತ್ತು ಅದರ ತನಿಖೆ ನಡೆಯುತ್ತಿದೆ, ನಾನು ಈ ವಿಚಾರದಲ್ಲಿ‌ ಕುಮಾರಸ್ವಾಮಿ  ಪಾತ್ರ ಇದೆ ಅಂತಾ ಹೇಳಿಲ್ಲಾ ನಮಗೆ ಮಾಡೋದಕ್ಕೆ ಬೇರೆ ಕೆಲಸ ಇದೆ.

ಯಾರಿಗೆ ಯಾರನ್ನ ಕಂಡ್ರೆ ಭಯ ಅಂತಾ ಚುನಾವಣೆಯಲ್ಲಿ ಗೊತ್ತಾಗುತ್ತೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್​.ಡಿ.ಕುಮಾರಸ್ವಾಮಿ ವಿರುದ್ದ ಕಿಡಿಕಾರಿದರು.

RELATED ARTICLES

Related Articles

TRENDING ARTICLES