Monday, December 23, 2024

ಅರೆ ಹುಚ್ಚ ರಾಹುಲ್ ಗಾಂಧಿ ಬರಬೇಕಲ್ಲ : ಯತ್ನಾಳ್ ಹೀಗೇಳಿದ್ಯಾಕೆ?

ವಿಜಯಪುರ : ರಾಜೀವ್ ಗಾಂಧಿ ಮೂರ್ತಿಯನ್ನು ನೋಡಲು ಈ ದೇಶದಲ್ಲಿ ಯಾರು ಬರುತ್ತಾರೆ? ಅದೇ ಸೋನಿಯಾ ಗಾಂಧಿ ವಾಪಸ್ ಬರಬೇಕಲ್ಲ. ಅರೆ ಹುಚ್ಚ ರಾಹುಲ್ ಗಾಂಧಿ ಬರಬೇಕಲ್ಲ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಕುಟುಕಿದ್ದಾರೆ.

ವಿಜಯಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜೀವ್ ಗಾಂಧಿಯೇ  ಬೇರೆ.. ಸರ್ದಾರ್ ವಲ್ಲಭಭಾಯಿ ಪಟೇಲ್ ಅವರೇ ಬೇರೆ ಎಂದು ಛೇಡಿಸಿದ್ದಾರೆ.

500 ಕೋಟಿ‌ ರೂಪಾಯಿ ವೆಚ್ಚದಲ್ಲಿ ರಾಜೀವ್ ಗಾಂಧಿ ಮೂರ್ತಿ ಸ್ಥಾಪನೆಗೆ ಹಣವಿದೆ. ಸರ್ದಾರ್ ವಲ್ಲಭಭಾಯಿ ಪಟೇಲ್ ಮೂರ್ತಿ ಮಾಡಿದಾಗ ವೇಸ್ಟ್ ಆಪ್ ಮನಿ ಅಂತ ಕಾಂಗ್ರೆಸ್ ನವರು ಆರೋಪ ಮಾಡಿದ್ದರು. ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಮೂರ್ತಿಯಿಂದ ಸಾವಿರಾರು ಕೋಟಿ ರೂಪಾಯಿ ಸರ್ಕಾರಕ್ಕೆ ಆದಾಯ ಬರುತ್ತಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಪ್ರಧಾನಿ ಮೋದಿಗೆ ಬೇಸರವಿದೆ

ರಾಜ್ಯ ರಾಜಕಾರಣದಲ್ಲಿ ಹೊಂದಾಣಿಕೆ ವಿಚಾರವಾಗಿ ಮಾತನಾಡಿದ ಅವರು, ಎಲ್ಲೆಲ್ಲಿ ಹೊಂದಾಣಿಕೆ ಆಗಿದೆ ಎಂಬುದು ನಮ್ಮ ಕೇಂದ್ರದ ಹೈಕಮಾಂಡ್ ಗೆ  ಗೊತ್ತಾಗಿದೆ. ಯಾರು? ಯಾರ ಜೊತೆ ಹೊಂದಾಣಿಕೆ ಇದ್ದಾರೆ. ಯಾವ ವಿಧಾನಸಭೆಯಲ್ಲಿ ಏನು ಹೊಂದಾಣಿಕೆಯಾಗಿದೆ ಎಂಬುದು ಕೇಂದ್ರದ ವರಿಷ್ಠರಿಗೆ ಗೊತ್ತು. ಇದನ್ನೆಲ್ಲ ಗಮನದಲ್ಲಿಟ್ಟುಕೊಂಡ ಕೇಂದ್ರದ ವರಿಷ್ಠರು, ವಿಪಕ್ಷ ನಾಯಕ ಹಾಗೂ ರಾಜ್ಯಾಧ್ಯಕ್ಷರ ನೇಮಕ ಕುರಿತು ಅಳೆದು ತೂಗಿ ನಿರ್ಣಯ ತೆಗೆದುಕೊಳ್ಳಲಿದ್ದಾರೆ. ಇಲ್ಲಿಯ ಹೊಂದಾಣಿಕೆ ರಾಜಕಾರಣದ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬೇಸರವಿದೆ ಎಂದು ಹೇಳಿದ್ದಾರೆ.

RELATED ARTICLES

Related Articles

TRENDING ARTICLES