Sunday, December 22, 2024

ಉಪೇಂದ್ರ ಆ ಪದ ಬಳಸಿದ್ದಾರೆ, SORRYನೂ ಕೇಳಿದ್ದಾರೆ : ಛಲವಾದಿ ನಾರಾಯಣಸ್ವಾಮಿ

ಯಾದಗಿರಿ : ನಟ ಉಪೇಂದ್ರ ಅವರು ಆ ರೀತಿಯ ಪದ ಬಳಸಬಾರದಾಗಿತ್ತು. ಬಳಸಿದ್ದಾರೆ, ಕ್ಷಮೆಯನ್ನೂ ಕೇಳಿದ್ದಾರೆ. ಯಾವ ಅರ್ಥದಲ್ಲಿ ಅವರು ಹೇಳಿದ್ದಾರೋ ಗೊತ್ತಿಲ್ಲ. ಆ ಅರ್ಥ ಗೊತ್ತಾದರೆ ನನಗೂ ಅರಿವಾಗುತ್ತೆ ಎಂದು ವಿಧಾನ ಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ ಹೇಳಿದ್ದಾರೆ.

ಯಾದಗಿರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉಪೇಂದ್ರ ಬೇಕು ಅಂತಲೇ ಹೇಳಿದ್ದಾರಾ ಹೇಗೆ ಅಂತ ಗೊತ್ತಿಲ್ಲ. ಆದರೂ ಕಾನೂನು ಮುಂದೆ ಬಂದಿದೆ.  ಹೀಗಾಗಿ, ತನ್ನ ಕೆಲಸ ಮಾಡ್ತಿದೆ ಎಂದು ತಿಳಿಸಿದ್ದಾರೆ.

ಯಾರೇ ಆದರೂ ಇದೊಂದು ಎಚ್ಚರಿಕೆ ಆಗಬೇಕು. ಕೆಲವೊಮ್ಮೆ ಕ್ಷಮೆ ಕೇಳಿದ್ರೂ, ಕಾನೂನು ತನ್ನ ಕೆಲಸ ಮಾಡಿಬಿಡುತ್ತೆ. ನಾಳೆ ಅವರು ನ್ಯಾಯಾಲಯಕ್ಕೆ ಹೋದಾಗ ಅಲ್ಲಿ ಸ್ಪಷ್ಟನೆ ನೀಡಿದ್ರೆ ಅದು ಮುಗಿದು ಹೋಗುತ್ತದೆ.  ಅಲ್ಲಿಯವರೆಗೂ ಕಾನೂನು ತನ್ನ ಕೆಲಸ ಮಾಡಬೇಕಾಗುತ್ತದೆ ಎಂದಿದ್ದಾರೆ.

ನಮ್ಮನ್ನು ಆಗಿದ್ರೆ ಬಿಡ್ತಿದ್ರಾ

ಜನರು, ಸಿನಿಮಾ ನಟರು ಅನ್ನೋ ಕಾರಣಕ್ಕೆ ಕ್ರಮ ಜರುಗಿಸಿಲ್ಲ ಅಂತಾರೆ. ನಮ್ಮನ್ನು ಆಗಿದ್ರೆ ಬಿಡ್ತಿದ್ರಾ ಅಂತ ಪ್ರಶ್ನೆ ಮಾಡ್ತಾರೆ. ಎಲ್ಲದಕ್ಕೂ ಕಾನೂನು ಇದೆ. ಈ ಹೇಳಿಕೆ ಕಾನೂನಿನ ಅಡಿಯಲ್ಲಿ ಬರುವುದರಿಂದ ಜನ ಸುಮ್ಮನೆ ಇರುವುದಿಲ್ಲ. ಅದರಲ್ಲೂ ಪರಿಶಿಷ್ಟ ಜಾತಿ ಪಂಗಡಗಳು ಬಹಳ ಕಾಲದಿಂದಲೂ ನೊಂದಿದ್ದಾರೆ. ನೊಂದು, ಬೆಂದು, ತುಳಿತಕ್ಕೆ ಒಳಗಾಗಿದ್ದಾರೆ ಎಂದು ಬೇಸರಿಸಿದ್ದಾರೆ.

ಆ ಸಮುದಾಯಗಳನ್ನು ಹೀಯಾಳುಸುವಂಥದ್ದು ಬಹುಕಾಲದಿಂದಲೂ ಬಂದಿದೆ. ಆ ಕಾರಣದಿಂದಲೇ ಕಾನೂನು, ಕಟ್ಟಳೆಗಳು ಬಂದಿದೆ. ಅದರಡಿಯಲ್ಲಿ ಯಾರೇ ಮಾತನಾಡಿದ್ರೂ, ಕಾನೂನು ತನ್ನ ಕೆಲಸ ಮಾಡುತ್ತದೆ. ಅದನ್ನು ನಾನು ಸ್ವಾಗತ ಮಾಡುತ್ತೇನೆ ಎಂದು ಛಲವಾದಿ ನಾರಾಯಣಸ್ವಾಮಿ ಹೇಳಿದ್ದಾರೆ.

RELATED ARTICLES

Related Articles

TRENDING ARTICLES