Monday, December 23, 2024

ಪ್ರೇಮಿ ಜೊತೆ ಸೇರಲು ಪತಿಯನ್ನೇ ಕೊಂದ ಪಾಪಿ ಪತ್ನಿ

ಚಿಕ್ಕಮಗಳೂರು : ಪ್ರೇಮಿ ಜೊತೆ ಸೇರಲು ಪತಿಯನ್ನೇ ಕೊಲೆ ಮಾಡಿ ಕೆರೆಗೆ ಎಸೆದಿರುವ ಪಾಪಿ ಪತ್ನಿ ಘಟನೆ ಕಡೂರು ತಾಲೂಕಿನ ಹನುಮನಹಳ್ಳಿಯಲ್ಲಿ ನಡೆದಿದೆ.

ಪಾವನ ಎಂಬ ಮಹಿಳೆ ಸಂಜಯ್ ಎಂಬುವವನ ಜೊತೆ ಅನೈತಿಕ ಸಂಬಂಧ ಇದ್ದು, ಪ್ರೇಮಿ ಜೊತೆ ಸೇರಲು ಅಡ್ಡಲಾಗಿದ್ದ ಪತಿ ನವೀನ್ (28) ಮೃತಪಟ್ಟ ವ್ಯಕ್ತಿ. ಈ ಹಿನ್ನೆಲೆ ಊಟದಲ್ಲಿ ನಿದ್ರೆ ಮಾತ್ರೆ ಹಾಕಿ ಜ್ಞಾನ ತಪ್ಪಿಸಿದ್ದ ಮಡದಿ. ಬಳಿಕ ಪ್ರಜ್ಞೆ ತಪ್ಪಿದ ಪತಿಯನ್ನ ಪ್ರೇಮಿ ಜೊತೆ ಸೇರಿ ಬೈಕನಲ್ಲಿ ತಂದು ಕೆರೆಗೆ ಎಸೆದಿದ್ದ ಪತ್ನಿ ಹಾಗೂ ಅವಳ ಪ್ರೀಯಕರ.

ಇದನ್ನು ಓದಿ : ಅಕ್ರಮ ಕಲ್ಲು ಸಾಗಾಟ ; ಕ್ಯಾರೆ ಎನ್ನದ ಅಧಿಕಾರಿಗಳು

ಆಗಸ್ಟ್ 6ರಂದು ಯಗಟಿ ಕೆರೆಯಲ್ಲಿ ಪತ್ತೆಯಾದ ನವೀನ್ ಮೃತದೇಹ.

ಈ ಘಟನಾ ಹಿನ್ನೆಲೆ ನನ್ನ ಮಗನ ಸಾವು ಸಹಜ ಸಾವಲ್ಲ ಅವನನ್ನು ಕೊಲೆ ಮಾಡಿದ್ದಾರೆ, ಎಂದು ಯಗಟಿ ಠಾಣಾ ವ್ಯಾಪ್ತಿಯಲ್ಲಿ ದೂರು ಕೊಟ್ಟಿದ್ದ ನವೀನ್ ಪೋಷಕರು. ಬಳಿಕೆ ತನಿಖೆ ಕೈಗೊಂಡ ವೇಳೆ ಪೋಲಿಸರಿಗೆ ಕೊಲೆ ಮಾಡಿರುವುದು ಅವನ ಪತ್ನಿಯೇ ಎಂದು ಖಾತ್ರಿಯಾಗಿದ್ದು, ಪಾವನ ಮತ್ತು ಸಂಜಯ್ ನನ್ನು ಬಂಧಿಸಿದ ಪೋಲಿಸರು. ವಿಚಾರಣೆ ನಡೆಸಿದಾಗ ಎಲ್ಲಾ ಸತ್ಯ ಬಾಯ್ಬಿಟ್ಟ ಪಾವನ ಮತ್ತು ಸಂಜಯ್ ಆರೋಪಿಗಳು.

RELATED ARTICLES

Related Articles

TRENDING ARTICLES