Wednesday, January 22, 2025

ನಾಗಾಸಾಧುವಿನ ಸೋಗಿನಲ್ಲಿ ಬಂದ ಕಳ್ಳರು; ಸಿನಿಮೀಯ ಸ್ಟೈಲಲ್ಲಿ ನಡೀತು ದರೋಡೆ

ತುಮಕೂರು : ನಾಗಾಸಾಧುಗಳ ಸೋಗಿನಲ್ಲಿ ಬಂದ ಇಬ್ಬರು ಅಸಾಮಿಗಳು ಪೋಟೋ ಸ್ಟುಡಿಯೋ ಮಾಲೀಕನ ಉಂಗುರವನ್ನು ಸಿನಿಮೀಯ ರೀತಿಯಲ್ಲಿ ದೋಚಿ ಪರಾರಿಯಾದ ಘಟನೆ ನಗರದ ಎಂ.ಜಿ ರಸ್ತೆಯಲ್ಲಿ ನಡೆದಿದೆ.

ಎಂ.ಜಿ ರಸ್ತೆಯ ಮಲ್ನಾಡ್ ಸ್ಟುಡಿಯೋ ಮಾಲೀಕ ಚಂದ್ರು ಎಂಬಾತನಿಗೆ ಮಂಕುಬೂದಿ ಎರಚಿ ಕಳ್ಳತನ ಮಾಡಿದ್ದಾರೆ. ನಾಗಾಸಾಧುಗಳ ಸೋಗಿನಲ್ಲಿ ಕಮಂಡಲ ಹಿಡಿದು ಕಾವಿಧಾರಿಗಳ ತೊಟ್ಟು ಬಂದ ಇಬ್ಬರು ನಕಲಿ ನಾಗಾಗಳು. ಮಾಲೀಕ ಚಂದ್ರುವಿನ ಕೈಯಲ್ಲಿ ರುದ್ರಾಕ್ಷಿ ಇಟ್ಟು ಎರಡೂ ಕೈಯನ್ನು ಬಲವಾಗಿ ಹಿಡಿದು ಮಂತ್ರ ಹೇಳಿಸುವ ನೆಪದಲ್ಲಿ ಬೆರಳಲ್ಲಿದ್ದ ಉಂಗುರವನ್ನು ಲಪಟಾಯಿಸಿದ್ದಾರೆ.

ಇದನ್ನು ಓದಿ : ಮಗುವಿನ ಜೊತೆ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಮಹಿಳೆ

ಬಳಿಕ ಎರಡು ನಿಮಿಷ ಧ್ಯಾನ ಮಾಡಿ ಎಂದು ಹೇಳಿ ಸ್ಥಳದಿಂದ ಕಾಲ್ಕಿತ್ತ ಸ್ವಾಮೀಜಿಗಳು. ಧ್ಯಾನದಿಂದ ಹೊರಬಂದು ನೋಡಿದಾಗ ಚಂದ್ರುವಿನ ಬಲಗೈಯಲ್ಲಿ ಇದ್ದ ಉಂಗುರವನ್ನು ಕದ್ದು, ಆಟೋ ಹತ್ತಿ ಪರಾರಿಯಾಗಿದ್ದ ನಕಲಿ ಸ್ವಾಮೀಜಿಗಳು.

ಈ ಘಟನಾ ಹಿನ್ನೆಲೆ ತುಮಕೂರು ನಗರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

RELATED ARTICLES

Related Articles

TRENDING ARTICLES