Wednesday, January 22, 2025

ಆಗಸ್ಟ್ 16ರಂದು ರೈತ ಸಂಘಟನೆಗಳಿಂದ ಕೊರಟಗೆರೆ ಬಂದ್​ಗೆ ಕರೆ​

ತುಮಕೂರು : ಕೊಬ್ಬರಿಗೆ ಕನಿಷ್ಠ 20 ಸಾವಿರ ಬೆಂಬಲ ಬೆಲೆಯನ್ನು ನೀಡುವಂತೆ ಆಗ್ರಹಿಸಿ ಕೊರಟಗೆರೆ ಪಟ್ಟಣ ಬಂದ್ ಮಾಡುವಂತೆ ರೈತ ಸಂಘಟನೆಗಳು ಕರೆ ನೀಡಿವೆ.

ಆಗಸ್ಟ್ 16 ರಂದು ಅಂಗಡಿ ಮುಂಗಟ್ಟುಗಳನ್ನು ಮುಚ್ಚಿ ಬಂದ್ ಗೆ ಸಹಕಾರ ನೀಡುವಂತೆ ಮಾಲೀಕರಲ್ಲಿ ಮನವಿ ಮಾಡಿಕೊಂಡ ರೈತ ಸಂಘಟನೆಗಳು. ಇಲ್ಲಿಯವರೆಗೆ 18 ಸಾವಿರ ರೂಪಾಯಿಗೆ ಮಾರಾಟವಾಗುತ್ತಿದ್ದ ಕೊಬ್ಬರಿ, ಇದೀಗ 7500 ರೂಪಾಯಿಗೆ ಮಾರಾಟವಾಗುತ್ತಿದೆ ಎಂದು ಪ್ರತಿಭಟನೆಯಲ್ಲಿ ಹೇಳಿದ್ದಾರೆ.

ಇದನ್ನು ಓದಿ : ಬೈಕ್​ಗೆ ಬೊಲೆರೊ ಡಿಕ್ಕಿ : ಶನಿ ಮಹಾತ್ಮ ದೇವಸ್ಥಾನಕ್ಕೆ ಹೊರಟ್ಟಿದ್ದ ಇಬ್ಬರು ವಿದ್ಯಾರ್ಥಿಗಳು ಸಾವು

ಕೊಬ್ಬರಿ ಬೆಲೆಯ ಕುಸಿತದಿಂದ ಸಂಕಷ್ಟ ಎದುರಿಸುತ್ತಿರುವ ತೆಂಗು ಬೆಳೆಗಾರರು. ಕೂಡಲೇ ನಾಫೆಡ್ ಮೂಲಕ ಕೊಬ್ಬರಿ ಖರೀದಿ ಪ್ರಕ್ರಿಯೆಯನ್ನು ಆರಂಭಿಸಬೇಕು ಎಂದು ಹೇಳಿದ್ದಾರೆ. ಮತ್ತು ಕೊಬ್ಬರಿಗೆ ಕೇಂದ್ರ ಸರ್ಕಾರ ಕೇವಲ 11,750 ರೂ ಬೆಂಬಲ ಬೆಲೆಯನ್ನು ನಿಗದಿಗೊಳಿಸಿದ್ದು, 20 ಸಾವಿರ ಬೆಂಬಲ ಬೆಲೆಯನ್ನು ಹೆಚ್ಚಳ ಮಾಡುವಂತೆ ಒತ್ತಾಯಿಸಿ ಕೊರಟಗೆರೆ ಪಟ್ಟಣ ಬಂದ್​ಗೆ ಮನವಿ ಮಾಡಿದ್ದಾರೆ.

ಕೇವಲ 11,750 ರೂ ಬೆಂಬಲ ಬೆಲೆಯನ್ನು ನಿಗದಿಪಡಿಸಿದ್ದು, ಇದು ನ್ಯಾಯಾಸಮ್ಮತವಾದ ಬೆಲೆ ಅಲ್ಲ. ಮೊದಲೆ ನುಸಿ ಪೀಡೆ, ಕಾಂಡ ಕೊರೆತ ಹಾಗೂ ಅತಿವೃಷ್ಟಿ, ಅನಾವೃಷ್ಟಿಯಿಂದ ಕೊಬ್ಬರಿ ಇಳುವರಿ ಕುಂಟಿತವಾಗಿತ್ತು. ಈಗ ಬೆಲೆ ಕುಸಿತದಿಂದ ಮತ್ತೋಷ್ಟು ನಷ್ಟವಾಗುತ್ತಿದೆ ಎಂದು ಉಪವಿಭಾಗಾಧಿಕಾರಿ ಕಚೇರಿವರೆಗೆ ಕಾಲ್ನಡಿಗೆ ಜಾಥಾ ನಡೆಸಿದ ರಾಜ್ಯ ರೈತ ಸಂಘ, ಹಸಿರು ಸೇನೆ ಸೇರಿಕೊಂಡು ರೈತರು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿರುದ್ಧ ಆಕ್ರೋಶ ಹೊರಹಾಕಿದ್ದರು.

RELATED ARTICLES

Related Articles

TRENDING ARTICLES