Monday, December 23, 2024

ಮಹಜರು ವೇಳೆ ಪೋಲಿಸರ ಮೇಲೆ ಹಲ್ಲೆ; ರೌಡಿಶೀಟರ್ ​ಗೆ ಗುಂಡೇಟು

ರಾಮನಗರ : ಸ್ಥಳ ಮಹಜರು ಮಾಡುವ ವೇಳೆ ಪೋಲಿಸರ ಮೇಲೆ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ ರೌಡಿಶೀಟರ್​ಗೆ ಪೋಲಿಸರು ಗುಂಡೇಟು ಹೊಡೆದಿರುವ ಘಟನೆ ನಗರದ ಹೊರವಲಯದ ವಡೇರಹಳ್ಳಿ ಬಳಿ ನಡೆದಿದೆ.

ಕಳೆದ ಮೂರು ದಿನಗಳ ಹಿಂದೆ ನಡೆದ ಕೊಲೆ ಕೇಸ್ ಹಾಗೂ ಕಳ್ಳತನ ಪ್ರಕರಣದಲ್ಲಿ ಆರೋಪಿಯಾಗಿದ್ದ ನಗರದ ಟೌನ್​ನ ನಾಲಬಂದವಾಡಿ ನಿವಾಸಿಯಾಗಿದ್ದ ರೌಡಿಶೀಟರ್ ಮತೀನ್ (20) ಗುಂಡೇಟು ತಿಂದ ರೌಡಿ. ಈ ಹಿನ್ನೆಲೆ ಮತೀನ್​ನನ್ನು ಬಂಧಿಸಿದ್ದ ಪೋಲಿಸರು. ಇಂದು ಸಂಜೆ ಸ್ಥಳ ಮಹಜರು ಮಾಡಲು ಘಟನಾ ಸ್ಥಳಕ್ಕೆ ಕರೆದೊಯ್ದಿದ್ದ ವೇಳೆ ಪೋಲಿಸರ ಮೇಲೆ ಹಲ್ಲೆ ಮಾಡಿ ಎಸ್ಕೇಪ್ ಆಗಲು ಪ್ರಯತ್ನಿಸಿದ್ದಾನೆ.

ಈ ವೇಳೆ ಮತೀನ್ ಕಾಲಿಗೆ ಎರಡು ಸುತ್ತು ಗುಂಡು ಹೊಡೆದಿರೋ ಡಿವೈಎಸ್ಪಿ ದಿನಕರ್ ಶೆಟ್ಟಿ.

ಇದನ್ನು ಓದಿ : ನಾಗಾಸಾಧುವಿನ ಸೋಗಿನಲ್ಲಿ ಬಂದ ಕಳ್ಳರು; ಸಿನಿಮೀಯ ಸ್ಟೈಲಲ್ಲಿ ನಡೀತು ದರೋಡೆ

ಬಳಿಕ ಗಾಯಗೊಂಡ ಮತೀನ್ ನನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿದೆ. ಘಟನೆಯಲ್ಲಿ ಇಬ್ಬರು ಪೋಲಿಸರಿಗೆ ಗಾಯವಾಗಿದ್ದು, ಚಿಕಿತ್ಸೆ ನೀಡಲಾಗಿದೆ. ಅಷ್ಟೇ ಅಲ್ಲದೆ ಘಟನಾ ಸ್ಥಳಕ್ಕೆ ಎಸ್ಪಿ ಕಾರ್ತಿಕ್ ರೆಡ್ಡಿ ಮತ್ತು ಎಎಸ್ಪಿ ಸುರೇಶ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ರಾಮನಗರ ಟೌನ್ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES

Related Articles

TRENDING ARTICLES