Wednesday, January 22, 2025

ಲಾರಿಗೆ ಡಿಕ್ಕಿ ಹೊಡೆದ ಕಾರು ; ಕುಟುಂಬದ ಐವರ ಸಾವು

ವಿಜಯಪುರ : ಚಲಿಸುತ್ತಿದ್ದ ಲಾರಿಗೆ ಕಾರು ಡಿಕ್ಕಿ ಹೊಡೆದು ಕುಟುಂಬದ ನಾಲ್ವರು ಸಾವನ್ನಪ್ಪಿರುವ ಘಟನೆ ಚಿತ್ರದುರ್ಗದ ಬಳಿ ನಡೆದಿದೆ.

ನಿನ್ನೆ ರಾತ್ರಿ ಸುಮಾರು 11 ಗಂಟೆಯ ವೇಳೆ ಚಿಕ್ಕಮಂಗಳೂರಿನತ್ತ ಕಾರಿನಲ್ಲಿ ಪ್ರಯಾಣ ಬೆಳೆಸಿದ್ದ ಕುಟುಂಬ, ಚಿತ್ರದುರ್ಗದ ಬಳಿ ಹೋಗುವಾಗ ಲಾರಿಗೆ ಹಿಂಬದಿಯಿಂದ ಕಾರು ಡಿಕ್ಕಿ ಹೊಡೆದಿದೆ. ಕಾರು ಡಿಕ್ಕಿ ಹೊಡೆದ ರಭಸಕ್ಕೆ ಕಾರಿನಲ್ಲಿದ್ದ, ಸಂಗನಬಸಪ್ಪ(36) , ಆತನ ಪತ್ನಿ ರೇಖಾ(29) ಹಾಗು ಪುತ್ರ ಅಗಸ್ತ್ಯ, ಸಂಬಂಧಿಕನಾದ ಭೀಮಾಶಂಕರ(26) ಮೃತಪಟ್ಟವರು. ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಇದನ್ನು ಓದಿ : ಆಗಸ್ಟ್ 16ರಂದು ರೈತ ಸಂಘಟನೆಗಳಿಂದ ಕೊರಟಗೆರೆ ಬಂದ್​ಗೆ ಕರೆ​

ಕಾರಿನಲ್ಲಿದ್ದ ಇಬ್ಬರು ಮಕ್ಕಳಿಗೆ ಗಂಭೀರ ಗಾಯವಾಗಿದ್ದು, ಮಧುಸೂದನ್ (24) ಚಿಕಿತ್ಸೆ ಫಲಿಸದೆ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ. ಮೂಲತಃ ಇವರು ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ಕುದುರೆಸಾಲವಾಡಗಿ ಗ್ರಾಮದವರೆಂದು ಮೃತರನ್ನು ಗುರುತಿಸಲಾಗಿದೆ.

ರೇಖಾಳ ತವರು ಮನೆ ಚಿಕ್ಕಮಂಗಳೂರು ಅಗಿದ್ದು, ಮಕ್ಕಳೊಂದಿಗೆ ರಜೆ ಕಳೆಯಲು ಪ್ಲಾನ್ ಮಾಡಿಕೊಂಡಿದ್ದ ಸಂಗನಬಸಪ್ಪ. ದುರಾದೃಷ್ಟವಶಾತ್ ಅಪಘಾತದಲ್ಲಿ ಪ್ರಾಣಾ ಕಳೆದುಕೊಂಡಿದ್ದಾರೆ.ಕುಟುಂಬದವರನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

RELATED ARTICLES

Related Articles

TRENDING ARTICLES