ಬೆಂಗಳೂರು: ಕರ್ನಾಟಕ ಮತ್ತು ತಮಿಳುನಾಡು ನಡುವೆ ಈ ಬಾರಿ ಮತ್ತೆ ಕಾವೇರಿ ಕದನ ಶುರುವಾಗುವ ಎಲ್ಲಾ ಲಕ್ಷಣಗಳು ಕಾಣುತ್ತಿದೆ. ಕರ್ನಾಟಕದ ಹಲವು ಜಲಾಶಯಗಳು ಭರ್ತಿಯಾಗದಿದ್ದರು ತಮಿಳು ನಾಡು ಮಾತ್ರ ತನಗೆ ನಿತ್ಯ 30 ಸಾವಿರ ಕ್ಯೂಸೆಕ್ಸ್ ನೀರನ್ನು ಬಿಡುವಂತೆ ಇತ್ತಾಯ ಮಾಡುತ್ತಿದೆ.
ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರವು ಸದ್ಯ ತಮಿಳುನಾಡು ಆಗ್ರಹಕ್ಕೆ ಮಣಿದಿದ್ದು ಪ್ರತಿ ನಿತ್ಯ 10 ರಿಂದ 12 ಸಾವಿರ ಕ್ಯೂಸೆಕ್ಸ್ ನೀರು ಬಿಡುವಂತೆ ಕರ್ನಾಟಕಕ್ಕೆ ನಿರ್ದೇಶನ ನೀಡಿದೆ. ಇದಕ್ಕೂ ಮುನ್ನ 30 ಕ್ಯೂಸೆಕ್ಸ್ ನೀರು ಬಿಡುವಂತೆ ಒತ್ತಾಯಿಸಿದ ತಮಿಳುನಾಡು ಸರ್ಕಾರಕ್ಕೆ ಈ ನಿರ್ದೇಶನದಿಂದ ಹಿನ್ನಡೆಯಾದಂತಾಗಿದೆ.
ಇದನ್ನು ಓದಿ: ರೀಲ್ಸ್ ಗೀಳು : ಪತ್ನಿಯನ್ನು ಕೊಂದು ನದಿಗೆ ಎಸೆದ ಪತಿ ಮತ್ತು ಮಾವ!
ನಿತ್ಯ 10 ರಿಂದ 12 ಸಾವಿರ ಕ್ಯೂಸೆಕ್ಸ್ ನೀರು ಬಿಡುಗಡೆಗೊಳಿಸುವಂತೆ ನಿರ್ದೇಶಿಸಿರುವ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ನಡೆಗೆ ತಮಿಳು ನಾಡು ಸರ್ಕಾರ ಆಕ್ಷೇಪ ವ್ಯಕ್ತಪಡಿಸಿದ್ದು ಸುಪ್ರೀಂಕೋರ್ಟ್ ಮೊರೆ ಹೋಗುವುದಾಗಿ ತಮಿಳುನಾಡು ಜಲಸಂಪಲ್ಮೂಲ ಸಚಿವ ದುರೈಮುರುಗನ್ ಚನ್ನೈನಲ್ಲಿ ತಿಳಿಸಿದ್ದಾರೆ.
ಈ ಭಾರಿ ರಾಜ್ಯದಲ್ಲಿ ಮಳೆಯ ಅಭಾವ ಹೆಚ್ಚಾಗಿರುವ ಕುರಿತು ಪ್ರಾಧಿಕಾರಕ್ಕೆ ಕರ್ನಾಟಕ ಸರ್ಕಾರ ಮನವರಿಕೆ ಮಾಡಿಕೊಟ್ಟಿತ್ತು, ಮಳೆ ಅಭಾವದಿಂದ ನಮ್ಮ ರೈತರಿಗೆ ನೀರಿನ ಅವಶ್ಯಕತೆ ಹೆಚ್ಚಾಗಿದೆ, ಬರ ನಿರ್ವಹಣೆಗೆ ನಾವು ಸಿದ್ದತೆ ಮಾಡಿಕೊಳ್ಳಬೇಕಾಗಿದೆ, ರಾಜ್ಯದ ಹಲವು ಡ್ಯಾಂಗಳು ಭರ್ತಿಯಾಗದೆ ಬರ ಪರಿಸ್ಥತಿತ ಎದುರಾಗಿದೆ. ಹೀಗಾಗಿ ಹೆಚ್ಚಿನ ನೀರನ್ನು ಹರಿಸಲು ಆಗುವುದಿಲ್ಲ ಎಂದು ಕರ್ನಾಟಕ ತಿಳಿಸಿದೆ.