Monday, December 23, 2024

ಸಿಸಿಬಿ ಪೊಲೀಸರಿಂದ ಪುನೀತ್​ ಕೆರೆಹಳ್ಳಿ ಬಂಧನ!

ಬೆಂಗಳೂರು : ಸಮಾಜ ವಿರೋಧ ಚಟುವಟಿಕೆಗಳಲ್ಲಿ ಭಾಗಿಯಾದ ಆರೋಪದಡಿ ಹಿಂದೂ ಸಂಘಟನೆ ಮುಖಂಡ ಪುನೀತ್‌ ಕೆರೆಹಳ್ಳಿಗೆ ಸಂಕಷ್ಟ ಎದುರಾಗಿದ್ದು ಗೂಂಡಾ ಕಾಯ್ದೆ ಕೇಸ್‌ ದಾಖಲು ಮಾಡಲಾಗಿದೆ.

ಇದನ್ನೂ ಓದಿ: ಅಕ್ರಮ ಕಟ್ಟಡ ನಿರ್ಮಾಣಕ್ಕೆ ಗೋಲ್ಡನ್​ ಸ್ಟಾರ್​ ಗಣೇಶ್ ಸಿದ್ದತೆ​: ಪರಿಸರವಾದಿಗಳ ಆರೋಪ!

ಈಗಾಗಲೇ ರಾಬರಿ, ದಬ್ಬಾಳಿಕೆ, ಹಲ್ಲೆ ಸೇರಿ ವಿವಿಧ ಪ್ರಕರಣದಲ್ಲಿ ಭಾಗಿಯಾಗಿರೋ ಪುನೀತ್‌ ಕೆರೆಹಳ್ಳಿ ವಿರುದ್ದ ವಿವಿಧ ಪೊಲೀಸ್‌ ಠಾಣೆಗಳಲ್ಲಿ ದೂರುಗಳು ದಾಖಲಾಗಿವೆ. ಹೋರಾಟದ ಹೆಸರಿನಲ್ಲಿ ದಾಂಧಲೆ ಮಾಡಿರೋ ಆರೋಪ, ಹಿಜಾಬ್‌, ಹಲಾಲ್‌ಕಟ್‌ ಹೋರಾಟದಲ್ಲಿ ಭಾಗಿಯಾಗಿ ಹಲವು ಗಣ್ಯರ ಫ್ಲೆಕ್ಸ್​ ಹರಿದು ಗಲಾಟೆ ಸೇರಿದಂದೆ 10 ಹೆಚ್ಚು ಪ್ರಕರಣಗಳು ದಾಖಲಾಗಿದೆ. ​ಈತನನ್ನು ಸಿಸಿಬಿ ಪೊಲೀಸರು ಗೂಂಡಾ ಕಾಯ್ದೆ ಅಡಿ ಬಂಧಿಸಿದ್ದಾರೆ.

ಪುನೀತ್​ ಕೆರೆಹಳ್ಳಿ ಸಮಾಜ ವಿರೋಧಿ ಚಟುವಟಿಕೆಗಳನ್ನು ತಡೆಯುವ ಸಲುವಾಗಿ ಕರ್ನಾಟಕ ಗೂಂಡಾ ಕಾಯಿದೆ ಅಡಿ ಪ್ರಕರಣ ದಾಖಲಿಸಿಕೊಂಡಿರುವ ಸಿಸಿಬಿ ಪೊಲೀಸರು ಈತನನ್ನು ಬಂಧಿಸಿ ಸದ್ಯ ಪರಪ್ಪನ ಆಗ್ರಹಾರ ಕಾರಗೃಹಕ್ಕೆ ಕಳಿಸಲಾಗಿದೆ.

RELATED ARTICLES

Related Articles

TRENDING ARTICLES