Tuesday, December 24, 2024

KSRTC ಬಸ್ ಡ್ರೈವರ್​ಗೆ ಪಂಚ್ ಕೊಟ್ಟ ಯುವಕ : ಮುಂದೇನಾಯ್ತು?

ಮೈಸೂರು : ಬೆಂಗಳೂರು-ಮೈಸೂರು ರಸ್ತೆಯಲ್ಲಿ KSRTC ಬಸ್ ಅಡ್ಡಗಟ್ಟಿ ಯುವಕ ಪುಂಡಾಟ ಮೆರೆದಿದ್ದಾನೆ. ಯುವಕ ಬಸ್​​ಗೆ ಅಡ್ಡಹಾಕಿ ಡ್ರೈವರ್ ಮೇಲೆ ಹಲ್ಲೆ ಮಾಡಿದ್ದಾನೆ.

ಓವರ್ ಟೇಕ್ ಮಾಡಿದ್ದಕ್ಕೆ ಕೋಪಗೊಂಡ ಯುವಕ ಬಸ್ ಅಡ್ಡಹಾಕಿ ಡ್ರೈವರ್​ಗೆ ಮನಸೋ ಇಚ್ಛೆ ಥಳಿಸಿದ್ದಾನೆ. ಸ್ಥಳಕ್ಕೆ ಬಂದ‌ ಪೊಲೀಸರು ಡ್ರೈವರ್ ರಕ್ಷಣೆ ಮಾಡಿದ್ದಾರೆ. ಈ ಸಂಬಂಧ ಲಷ್ಕರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಾರುಲಾರಿ ಡಿಕ್ಕಿ: ಇಬ್ಬರು ಸಾವು

ಹಾವೇರಿ ಜಿಲ್ಲೆಯ ಶಿಗ್ಗಾಂವಿ ತಾಲೂಕಿನ ತಿಮ್ಮಾಪುರ ಗ್ರಾಮದ ಬಳಿಯ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಕಾರು-ಲಾರಿ ನಡುವೆ ಡಿಕ್ಕಿಯಾಗಿ ಇಬ್ಬರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ನಡೆದಿದೆ. ಕಾರಿನಲ್ಲಿದ್ದ ಬಿ.ಮನೋಹರ, ಪ್ರಿಯಾಂಕ ಮೃತ ದುರ್ದೈವಿಗಳು.

ಗಾಯಾಳು ಮೊನಾಲಿಸಾರನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೃತ ಬಿ.ಮನೋಹರ, ಪ್ರಿಯಾಂಕಾ ಬೆಂಗಳೂರು ಮೂಲದವರು. ಬೆಂಗಳೂರಿನಿಂದ ಮುಂಬೈ ಕಡೆ ಕಾರಿನಲ್ಲಿ ತೆರಳ್ತಿದ್ದಾಗ ಅಪಘಾತ ಸಂಭವಿಸಿದೆ. ತಡಸ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES

Related Articles

TRENDING ARTICLES