ಚಿಕ್ಕಬಳ್ಳಾಪುರ : ಗುಡಿಬಂಡೆ ತಾಲ್ಲೂಕು ಕಚೇರಿಯ ಅಧಿಕಾರಿಗಳ ಭ್ರಷ್ಟಾಚಾರ ಕುರಿತು ಸಾಕ್ಷಾಧಾರ ಸಮೇತ ವಿಸ್ತೃತ ವರದಿ ಪ್ರಸಾರ ಮಾಡಿದ್ದ ಬೆನ್ನಲ್ಲೇ ತನಿಖೆಗೆ ಜಿಲ್ಲಾಧಿಕಾರಿ ರವೀಂಗ್ರ ಆದೇಶಿಸಿದ್ದರು.
ಇದನ್ನೂ ಓದಿ: ನಗರದ ಪ್ರತಿ ಮನೆ ಮೇಲೂ ತಿರಂಗ ಧ್ವಜ ಹಾರಟ : ತುಷಾರ್ ಗಿರಿನಾಥ್
ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ಉಪವಿಭಾಗಾಧಿಕಾರಿಗಳು ತನೆಖೆಗೆಂದು ತಾಸೀಲ್ದಾರ್ ಕಚೇರಿಗೆ ಶುಕ್ರವಾರ ಭೇಟಿ ನೀದ್ದಾಗ ತಹಶಿಲ್ದಾರ್ ಹಾಗೂ ತಾಸೀಲ್ದಾರ್ ಕಚೇರಿಯ ಸಿಬ್ಬಂದಿಗಳ ವಿರುದ್ಧ ಅಲ್ಲಿನ ಸ್ಥಳೀಯರು ಹಾಗೂ ರೈತರು ಆರೋಪಗಳ ಸುರಿಮಳೆ ಸುರಿಸಿದರು. ಪ್ರತಿ ಕೆಲಸಕ್ಕೂ ಜನಸಾಮಾನ್ಯರ ಬಳಿ ಹಣ ಕೇಳ್ತಾರೆ. ಲಂಚ ಕೊಡದಿದ್ದರೇ ಯಾವ ಕೆಲಸವೂ ಆಗೋದೇ ಇಲ್ಲ ಎಂದು ತನಿಖಾಧಿಕಾರಿಗಳಾದ ಉಪವಿಭಾಗಾಧಿಕಾರಿಗಳ ಮುಂದೆ ಆಕ್ರೋಶ ವ್ಯಕ್ತಪಡಿಸಿದರು.
ಪವರ್ ಟಿವಿ ವರದಿ ಪ್ರಸಾರವಾದ ಹಿನ್ನೆಲೆ ಎಚ್ಚೆತ್ತ ತಾಲ್ಲೂಕು ಆಡಳಿತ. ವರ್ಷಾನುಗಟ್ಟಲೇ ವಿಲೇವಾರಿ ಮಾಡದೆ ಇಟ್ಟುಕೊಂಡಿದ್ದ ಕಡತಗಳನ್ನು ತ್ವರಿತವಾಗಿ ವಿಲೇವಾರಿ ಮಾಡಲು ಮುಂದಾಗಿದ್ದಾರೆ. ಪವರ್ ಟಿವಿ ವರದಿಗೆ ಗುಡಿಬಂಡೆ ತಾಲ್ಲೂಕಿನ ಜನ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.