Tuesday, December 24, 2024

ಟೆಂಪೋ ಟಯರ್ ಅಡಿ ಸಿಲುಕಿ ಬಾಲಕ ಸಾವು

ಮೈಸೂರು : ವೇಗವಾಗಿ ಸೈಕಲ್​ನಲ್ಲಿ ಬಂದ ಮಕ್ಕಳು ಟೆಂಪೋ ಟಯರ್ ಅಡಿಗೆ ಸಿಲುಕಿ ಒರ್ವ ಬಾಲಕ ಸಾವನ್ನಪ್ಪಿರುವ ಘಟನೆ ನಗರದ ಅಭಿಷೇಕ್ ವೃತ್ತದಲ್ಲಿ ನಡೆದಿದೆ.

ಬಾಲಾಜಿ ಅಲಿಯಾಸ ತಿರುಪತಿ ಮೃತಪಟ್ಟ ಬಾಲಕ. 10 ನೇ ತರಗತಿ ಓದುತ್ತಿದ್ದು, ತನ್ನ ಸ್ನೇಹಿತನ ಜೊತೆ ಸೈಕಲ್​ನಲ್ಲಿ ಮನೆಗೆ ತೆರಳುತ್ತಿದ್ದ ಇಬ್ಬರು ಮಕ್ಕಳು. ಈ ವೇಳೆ ಸರ್ಕಲ್ ಒಂದರಲ್ಲಿ ಮಕ್ಕಳು ಅತೀ ರಭಸದಿಂದ ಬಂದ ಪರಿಣಾಮ ಟೆಂಪೋ ವಾಹನ ಒಂದು ಬಂದಿದ್ದು, ಸೈಕಲ್ ವೇಗವನ್ನು ನಿಯಂತ್ರಿಸಲಾಗದೆ ಟೆಂಪೋ ಹಿಂಬದಿ ಟಯರ್ ಗೆ ಸಿಕ್ಕಿ ಬಾಲಕ ಸ್ಥಳದಲ್ಲೆ ಮೃತಪಟ್ಟಿದ್ದಾನೆ.

ಇದನ್ನು ಓದಿ : ಸಿಸಿಬಿ ಪೊಲೀಸರಿಂದ ಪುನೀತ್​ ಕೆರೆಹಳ್ಳಿ ಬಂಧನ!

ಸದ್ಯ ಅದೃಷ್ಟವಶಾತ್ ಮತ್ತೊಬ್ಬ ಬಾಲಕ ಸಣ್ಣ ಪುಟ್ಟ ಗಾಯಗಳಾಗಿದ್ದು, ಅಪಘಾತದಿಂದ ಪರಾಗಿದ್ದಾನೆ. ಮೂಲತಃ ಯಳಂದೂರ ಗ್ರಾಮದ ರಾಮಣ್ಣ ಎಂಬುವವನ ಪುತ್ರನಾಗಿದ್ದು, ಮಗನನ್ನು ಕಳೆದುಕೊಂಡು ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ಈ ಘಟನೆ ಹಿನ್ನೆಲೆ ವಿವಿ ಪುರಂ ಸಂಚಾರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES

Related Articles

TRENDING ARTICLES