ಬೆಂಗಳೂರು: ರಾಷ್ಟ್ರಗೀತೆಗೆ ಹೊಸ ಸಂಗೀತ ಸ್ಪರ್ಶವನ್ನು ನೀಡಲಾಗಿದ್ದು ಆಗಸ್ಟ್ 15 ರ ಸ್ವಾತಂತ್ರ್ಯ ದಿನಾಚರಣೆಯಂದು ಈ ಹಾಡನ್ನು ಬಿಡುಗಡೆ ಮಾಡಲಾಗುತ್ತಿದೆ ಎಂದು ಗ್ರ್ಯಾಮಿ ಪ್ರಶಸ್ತಿ ವಿಜೇತ ಸಂಗೀತ ನಿರ್ದೇಶಕ ರಿಕ್ಕಿ ಕೇಜ್ ತಿಳಿಸಿದ್ದಾರೆ
ಇದನ್ನೂ ಓದಿ: ಮೋದಿ ಪ್ರಧಾನಿ ಆಗಲ್ಲ.. ಮಹಿಳೆಗೆ ಮುಂದಿನ PM ಆಗುವ ಯೋಗ
ಬ್ರಿಟನ್‌ನಲ್ಲಿರುವ ರಾಯಲ್ ಫಿಲಮಾಟಿಕ್ ಆರ್ಕೆಸ್ಟ್ರಾದ ನೂರು ಕಲಾವಿದರ ಸಹಕಾರದೊಂದಿಗೆ ಅಬ್ಬೆ ರೋಡ್ ಸ್ಟುಡಿಯೋದಲ್ಲಿ ರಾಷ್ಟ್ರಗೀತೆಗೆ ಸಿಂಫನಿ ಆರ್ಕೆಸ್ಟ್ರಾ ಮಾದರಿಯಲ್ಲಿ ಸಂಗೀತ ಸಂಯೋಜನೆ ಮಾಡಲಾಗಿದೆ. ಈ ಹಿಂದೆ 2015ರಲ್ಲಿ ಹಾಗೂ 2022ರಲ್ಲಿಯೂ ರಿಕ್ಕಿ ಕೇಜ್ ಇದೇ ರೀತಿಯಲ್ಲಿ ರಾಷ್ಟ್ರಗೀತೆಗೆ ಹೊಸ ಸಂಗೀತ ನೀಡಲಾಗಿತ್ತು.
‘ರಾಷ್ಟ್ರಗೀತೆ ಕೇಳಿದರೆ ಪ್ರತಿ ಭಾರತೀಯನಿಗೂ ರೋಮಾಂಚನವಾಗುತ್ತದೆ. ಹೀಗಾಗಿ ಈ ಪ್ರಯತ್ನ ಮಾಡಿದ್ದೇನೆ. ಸುಮಾರು ಮೂರು ತಿಂಗಳ ಕಾಲ ಕೆಲಸ ಮಾಡಿ, ಲಂಡನ್‌ನ ನೂರು ಕಲಾವಿದರೊಂದಿಗೆ ಇದನ್ನು ಮಾಡಲಾಗಿದೆ. ಇದಕ್ಕೆ ಯಾವುದೇ ರೀತಿಯ ಕಾಪಿರೈಟ್ ಇರುವುದಿಲ್ಲ. ಆದರೆ, ಯಾರೂ ಇದಕ್ಕೆ ಅಪಮಾನ ಮಾಡದೆ ಬಳಸಿಕೊಳ್ಳಬೇಕು’ ಎಂದು ಅವರು ಹೇಳಿದ್ದಾರೆ.