Wednesday, January 22, 2025

ಕೆಂಪಣ್ಣ ವಿರುದ್ಧ ಕಿಕ್ ಬ್ಯಾಕ್ ಆರೋಪ ಮಾಡಿದ ಮಾಜಿ ಸಚಿವ ಗೋಪಾಲಯ್ಯ

ಬೆಂಗಳೂರು: ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣನವರ ವಿರುದ್ದ ಮಾಜಿ ಸಚಿವ ಕೆ.ಗೋಪಾಲಯ್ಯ ಕಿಕ್ ಬ್ಯಾಕ್ ಆರೋಪ ಮಾಡಿದ್ದಾರೆ.

ಇದನ್ನೂ ಓದಿ: ನಾವು ಕಮಿಷನ್ ಹಿಂದೆ ಬಿದ್ದವರಲ್ಲ, ಕಮಿಷನ್ ಭ್ರಷ್ಟರ ವಿರುದ್ದ ಬಿದ್ದಿರುವವರು : ಸಿಎಂ

ಬೆಂಗಳೂರಿನಲ್ಲಿ ಮಾತನಾಡಿದ ಅವರು, ಕೆಂಪಣ್ಣನವರೇ 40% ಕಮಿಷನ್ ಎಂದು ಬೆಂಗಳೂರಿನಿಂದ ದೆಹಲಿವರೆಗೂ ಹೋಗಿ ದೂರು ಕೊಟ್ಟಿದ್ದೀರಿ. ಕಾಂಗ್ರೆಸ್​ನಿಂದ ಕಿಕ್ ಬ್ಯಾಕ್ ತೆಗೆದುಕೊಂಡು ಗುತ್ತಿಗೆದಾರರ ಪರ ನಿಲ್ತಿರೋ ಅಥವಾ ಕಾಂಗ್ರೆಸ್ ಪರ ನಿಲ್ತೀರೋ? ಎಂದು ಪ್ರಶ್ನೆ ಮಾಡಿದರು.

ನಿಮಗೆ ತಾಕತ್ ಇದ್ರೆ ಯಾರಿಗೆ ಹಣ ಕೊಟ್ಟಿದ್ದೀರಿ ಎಂದು ತಿಳಿಸಿ. ಯಾವ ಶಾಸಕರಿಗೆ, ಯಾವ ಸಚಿವರಿಗೆ 40% ಪರ್ಸೆಂಟ್ ಹಣ ಕೊಟ್ಟಿದ್ದೀರಿ ಎಂಬುದನ್ನು ಬಹಿರಂಗಪಡಿಸಿ.  ಇಲ್ಲವಾದಲ್ಲಿ ರಾಜ್ಯದ ಜನರಲ್ಲಿ ನೀವು ಕ್ಷಮೆ ಕೇಳಿ ಎಂದು ಕೆಂಪಣ್ಣ ವಿರುದ್ಧ ಕಿಕ್ ಬ್ಯಾಕ್ ಆರೋಪ ಮಾಡಿದರು.

RELATED ARTICLES

Related Articles

TRENDING ARTICLES